ಯೋಹಾನನು ಸಾಕ್ಷಿಕೊಟ್ಟು--ಆತ್ಮನು ಪಾರಿವಾಳ ದಂತೆ ಪರಲೋಕದಿಂದ ಇಳಿದು ಆತನ ಮೇಲೆ ನೆಲೆ ಗೊಂಡಿರುವದನ್ನು ನಾನು ನೋಡಿದೆನು.
30ನನ್ನ ಹಿಂದೆ ಒಬ್ಬ ಮನುಷ್ಯನು ಬರು ತ್ತಾನೆ; ಆತನು ನನಗಿಂತ ಮೊದಲೇ ಇದ್ದದರಿಂದ ನನಗಿಂತ ಮುಂದಿನವನು ಎಂದು ನಾನು ಯಾರ ವಿಷಯದಲ್ಲಿ ಹೇಳಿದೆನೋ ಆತನೇ ಈತನು.
31ನಾನು ಆತನನ್ನು ಅರಿತಿರಲಿಲ್ಲ; ಆದರೆ ಆತನು ಇಸ್ರಾಯೇಲ್ಯರಿಗೆ ಪ್ರತ್ಯಕ್ಷನಾಗುವಂತೆ ನಾನು ನೀರಿನಿಂದ ಬಾಪ್ತಿಸ್ಮ ಮಾಡಿಸುವವನಾಗಿ ಬಂದಿದ್ದೇನೆ ಅಂದನು.
32ಯೋಹಾನನು ಸಾಕ್ಷಿಕೊಟ್ಟು--ಆತ್ಮನು ಪಾರಿವಾಳ ದಂತೆ ಪರಲೋಕದಿಂದ ಇಳಿದು ಆತನ ಮೇಲೆ ನೆಲೆ ಗೊಂಡಿರುವದನ್ನು ನಾನು ನೋಡಿದೆನು.
33ನಾನು ಆತನನ್ನು ಅರಿತಿರಲಿಲ್ಲ; ಆದರೆ ನೀರಿನಿಂದ ಬಾಪ್ತಿಸ್ಮ ಮಾಡಿಸುವದಕ್ಕೆ ನನ್ನನ್ನು ಕಳುಹಿಸಿದಾತನೇ ನನಗೆ-- ಯಾವಾತನ ಮೇಲೆ ಆತ್ಮನು ಇಳಿದು ನೆಲೆಯಾಗಿರು ವದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮ ನಿಂದ ಬಾಪ್ತಿಸ್ಮ ಮಾಡಿಸುವಾತನು ಎಂದು ಹೇಳಿದನು.
34ನಾನು ನೋಡಿ ಈತನೇ ದೇವರಮಗನೆಂದು ಸಾಕ್ಷಿ ಕೊಟ್ಟಿದ್ದೇನೆ ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ