ಧರ್ಮೋಪದೇಶಕಾಂಡ 31:5

ನಾನು ನಿಮಗೆ ಆಜ್ಞಾಪಿಸಿದ ಸಮಸ್ತ ಆಜ್ಞೆಯ ಪ್ರಕಾರ ನೀವು ಅವರಿಗೆ ಮಾಡುವಹಾಗೆ ಕರ್ತನು ಅವರನ್ನು ನಿಮ್ಮ ಮುಂದೆ ಒಪ್ಪಿಸಿಬಿಡುವನು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 31

3ನಿನ್ನ ದೇವರಾದ ಕರ್ತನು ತಾನೇ ನಿನ್ನ ಮುಂದೆ ಹೋಗುವನು. ಆತನು ಆ ಜನಾಂಗಗಳನ್ನು ನಿನ್ನ ಮುಂದೆ ನಾಶಮಾಡುವನು; ನೀನು ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವಿ; ಕರ್ತನು ಹೇಳಿದ ಪ್ರಕಾರ ಯೆಹೋಶುವನು ನಿನ್ನ ಮುಂದೆ ಹೋಗುವನು.

4ಕರ್ತನು ಅಮೋರಿಯರ ಅರಸನಾದ ಸೀಹೋನನಿಗೂ ಓಗನಿಗೂ ಆತನು ನಾಶಮಾಡಿದ ಅವರ ದೇಶಕ್ಕೂ ಮಾಡಿದಂತೆ ಆ ಜನಾಂಗಗಳಿಗೆ ಮಾಡುವನು.

5ನಾನು ನಿಮಗೆ ಆಜ್ಞಾಪಿಸಿದ ಸಮಸ್ತ ಆಜ್ಞೆಯ ಪ್ರಕಾರ ನೀವು ಅವರಿಗೆ ಮಾಡುವಹಾಗೆ ಕರ್ತನು ಅವರನ್ನು ನಿಮ್ಮ ಮುಂದೆ ಒಪ್ಪಿಸಿಬಿಡುವನು.

6ಬಲವಾಗಿರ್ರಿ; ಧೈರ್ಯವಾಗಿರ್ರಿ; ಭಯಪಡಬೇಡಿರಿ; ಅವರಿಗೆ ಹೆದರಬೇಡಿರಿ; ನಿನ್ನ ದೇವರಾದ ಕರ್ತನು ತಾನೇ ನಿನ್ನ ಸಂಗಡ ಹೋಗುತ್ತಾನೆ; ಆತನು ನಿನ್ನನ್ನು ಬಿಡುವದಿಲ್ಲ, ವಿಸರ್ಜಿಸುವದೂ ಇಲ್ಲ ಎಂದು ಹೇಳಿದನು.

7ಆಗ ಮೋಶೆಯು ಯೆಹೋಶುವನನ್ನು ಕರೆದು ಸಮಸ್ತ ಇಸ್ರಾಯೇಲಿನ ಮುಂದೆ ಅವನಿಗೆ--ಬಲ ವಾಗಿರು; ಧೈರ್ಯವಾಗಿರು; ಯಾಕಂದರೆ ನೀನು ಈ ಜನರ ಸಂಗಡ ಹೋಗಿ ಕರ್ತನು ಅವರ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣಮಾಡಿದ ದೇಶದಲ್ಲಿ ಸೇರ ಬೇಕು; ನೀನು ಅದನ್ನು ಅವರಿಗೆ ಸ್ವಾಸ್ತ್ಯವಾಗಿ ಕೊಡ ಬೇಕು.

ಧರ್ಮೋಪದೇಶಕಾಂಡ 31 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी