೧ ಅರಸುಗಳು 14:9

ನೀನು ಹೋಗಿ ನನಗೆ ಕೋಪ ವನ್ನೆಬ್ಬಿಸುವ ಅನ್ಯ ದೇವರುಗಳನ್ನೂ ಎರಕ ಹೊಯ್ಯ ಲ್ಪಟ್ಟ ವಿಗ್ರಹಗಳನ್ನೂ ನಿನಗೆ ಮಾಡಿಕೊಂಡು ನನ್ನನ್ನು ನಿನ್ನ ಬೆನ್ನಿನ ಹಿಂದಕ್ಕೆ ಹಾಕಿದಿ.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 14

7ನೀನು ಹೋಗಿ ಯಾರೊಬ್ಬಾಮನಿಗೆ ಹೇಳಬೇಕಾದದ್ದು-- ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇ ನಂದರೆ--ನಾನು ಜನರೊಳಗಿಂದ ಎತ್ತಿ, ನಿನ್ನನ್ನು ಹೆಚ್ಚಿಸಿ ನನ್ನ ಜನರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗ ಮಾಡಿ ದಾವೀದನ ಮನೆಯಿಂದ ರಾಜ್ಯವನ್ನು ಕಿತ್ತು ಕೊಂಡು ನಿನಗೆ ಕೊಟ್ಟೆನು.

8ಆದರೆ ನನ್ನ ಆಜ್ಞೆಗಳನ್ನು ಕೈಕೊಂಡು ನನ್ನ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದನ್ನು ಮಾಡಿ ತನ್ನ ಸಂಪೂರ್ಣವಾದ ಹೃದಯದಿಂದ ನನ್ನನ್ನು ಹಿಂಬಾಲಿಸಿದ ನನ್ನ ಸೇವಕನಾದ ದಾವೀದನ ಹಾಗೆ ನೀನು ಇರದೆ ನಿನಗೆ ಮುಂಚೆ ಇದ್ದವರೆಲ್ಲರಿಗಿಂತ ಕೆಟ್ಟದ್ದನ್ನು ಮಾಡಿದಿ.

9ನೀನು ಹೋಗಿ ನನಗೆ ಕೋಪ ವನ್ನೆಬ್ಬಿಸುವ ಅನ್ಯ ದೇವರುಗಳನ್ನೂ ಎರಕ ಹೊಯ್ಯ ಲ್ಪಟ್ಟ ವಿಗ್ರಹಗಳನ್ನೂ ನಿನಗೆ ಮಾಡಿಕೊಂಡು ನನ್ನನ್ನು ನಿನ್ನ ಬೆನ್ನಿನ ಹಿಂದಕ್ಕೆ ಹಾಕಿದಿ.

10ಆದದರಿಂದ ಇಗೋ, ನಾನು ಯಾರೊಬ್ಬಾಮನ ಮನೆಯ ಮೇಲೆ ಕೇಡನ್ನು ಬರಮಾಡಿ ಯಾರೊಬ್ಬಾಮನ ಕಡೆಯಿಂದ ಸಮಸ್ತ ಗಂಡಸರನ್ನೂ ಇಸ್ರಾಯೇಲಿನಲ್ಲಿ ಉಳಿದು ಬಚ್ಚಿಟ್ಟು ಕೊಂಡವರನ್ನೂ ಕಡಿದು ಬಿಟ್ಟು ಅದು ತೀರುವ ವರೆಗೆ ಮನುಷ್ಯನು ಕಸವನ್ನು ಹೇಗೆ ತೆಗೆದು ಹಾಕುತ್ತಾನೋ ಹಾಗೆಯೇ ನಾನು ಯಾರೊಬ್ಬಾಮನ ಮನೆಯ ಜನಶೇಷವನ್ನು ತೆಗೆದು ಹಾಕುತ್ತೇನೆ.

11ಯಾರೊಬ್ಬಾಮನವರಲ್ಲಿ ಯಾವನು ಪಟ್ಟಣದಲ್ಲಿ ಸಾಯುವನೋ ಅವನನ್ನು ನಾಯಿಗಳು ತಿನ್ನುವವು; ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವವು ಎಂದು ಕರ್ತನು ಹೇಳಿದ್ದಾನೆ.

೧ ಅರಸುಗಳು 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी