ಪಶುಗಳನ್ನು ಮಾತ್ರ ನಮಗೆ ಸುಲುಕೊಂಡು ಪಟ್ಟಣಗಳನ್ನು ಕೊಳ್ಳೆ ಹೊಡೆದೆವು.
33ನಮ್ಮ ದೇವರಾದ ಕರ್ತನು ಅವನನ್ನು ನಮ್ಮ ಕೈಗೆ ಕೊಟ್ಟುಬಿಟ್ಟಿ ದ್ದರಿಂದ ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ ಹೊಡೆದೆವು;
34ಆ ಕಾಲದಲ್ಲಿ ಅವನ ಪಟ್ಟಣಗಳನ್ನೆಲ್ಲಾ ತಕ್ಕೊಂಡು ಪ್ರತಿಯೊಂದು ಪಟ್ಟಣದ ಗಂಡಸರನ್ನೂ ಹೆಂಗಸರನ್ನೂ ಚಿಕ್ಕವರನ್ನೂ ನಿರ್ಮೂಲ ಮಾಡಿದೆವು, ಒಬ್ಬರನ್ನೂ ಉಳಿಸಲಿಲ್ಲ.
35ಪಶುಗಳನ್ನು ಮಾತ್ರ ನಮಗೆ ಸುಲುಕೊಂಡು ಪಟ್ಟಣಗಳನ್ನು ಕೊಳ್ಳೆ ಹೊಡೆದೆವು.
36ಅರ್ನೋನಿನ ತೀರದಲ್ಲಿರುವ ಅರೋ ಯೇರ್ ಮತ್ತು ಆ ಹಳ್ಳದ ಪಟ್ಟಣವು ಮೊದಲ್ಗೊಂಡು ಗಿಲ್ಯಾದಿನ ವರೆಗೂ ಒಂದು ಪಟ್ಟಣವಾದರೂ ನಮಗೆ ಅಸಾಧ್ಯವಾಗಿರಲಿಲ್ಲ; ನಮ್ಮ ದೇವರಾದ ಕರ್ತನು ಅವುಗಳನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿದನು.
37ಅಮ್ಮೋನಿಯರ ಮಕ್ಕಳ ದೇಶಕ್ಕೂ ಯಬ್ಬೋಕ್ ನದಿಯ ಯಾವ ದೊಂದು ಸ್ಥಳಕ್ಕೂ ಪರ್ವತ ಪಟ್ಟಣಗಳಿಗೂ ನಮ್ಮ ದೇವರಾದ ಕರ್ತನು ನಮಗೆ ಬೇಡವೆಂದ ಯಾವ ಸ್ಥಳಕ್ಕೂ ನೀನು ಮಾತ್ರ ಬರಲಿಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ