ಪ್ರಕಟನೆ 8:8

ಎರಡನೆಯ ದೂತನು ಊದಿದಾಗ ಬೆಂಕಿಯಿಂದ ಉರಿಯುವ ದೊಡ್ಡ ಬೆಟ್ಟವೋ ಎಂಬಂತಿದ್ದದ್ದು ಸಮುದ್ರದಲ್ಲಿ ಹಾಕಲ್ಪಟ್ಟಿತು. ಆಗ ಸಮುದ್ರದ ಮೂರ ರಲ್ಲಿ ಒಂದು ಭಾಗ ರಕ್ತವಾಯಿತು;

ಸಂದರ್ಭದೊಂದಿಗೆ ಓದಿ · ಪ್ರಕಟನೆ 8

6ಏಳು ತುತೂರಿಗಳಿದ್ದ ಏಳು ಮಂದಿ ದೂತರು ತುತೂರಿಗಳನ್ನೂದುವದಕ್ಕೆ ಸಿದ್ಧಮಾಡಿಕೊಂಡರು.

7ಮೊದಲನೆಯ ದೂತನು ಊದಿದಾಗ ರಕ್ತದಲ್ಲಿ ಕಲಸಿದ್ದ ಆನೆಕಲ್ಲಿನ ಮಳೆಯೂ ಬೆಂಕಿಯೂ ಭೂಮಿಗೆ ಸುರಿಸಲ್ಪಟ್ಟವು; ಮರಗಳೊಳಗೆ ಮೂರರಲ್ಲಿ ಒಂದು ಭಾಗ ಸುಟ್ಟುಹೋಯಿತು; ಹಸುರು ಹುಲ್ಲೆಲ್ಲಾ ಸುಟ್ಟುಹೋಯಿತು.

8ಎರಡನೆಯ ದೂತನು ಊದಿದಾಗ ಬೆಂಕಿಯಿಂದ ಉರಿಯುವ ದೊಡ್ಡ ಬೆಟ್ಟವೋ ಎಂಬಂತಿದ್ದದ್ದು ಸಮುದ್ರದಲ್ಲಿ ಹಾಕಲ್ಪಟ್ಟಿತು. ಆಗ ಸಮುದ್ರದ ಮೂರ ರಲ್ಲಿ ಒಂದು ಭಾಗ ರಕ್ತವಾಯಿತು;

9ಸಮುದ್ರದಲ್ಲಿರುವ ಪ್ರಾಣವಿದ್ದ ಜೀವಿಗಳೊಳಗೆ ಮೂರರಲ್ಲಿ ಒಂದು ಭಾಗ ಸತ್ತುಹೋಯಿತು; ಹಡಗುಗಳೊಳಗೆ ಮೂರರಲ್ಲಿ ಒಂದು ಭಾಗ ನಾಶವಾಯಿತು.

10ಮೂರನೆಯ ದೂತನು ಊದಿದಾಗ ದೀಪ ದಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶ ದಿಂದ ಬಿತ್ತು. ಅದು ನದಿಗಳೊಳಗೆ ಮೂರರಲ್ಲಿ ಒಂದು ಭಾಗದ ಮೇಲೆಯೂ ನೀರಿನ ಒರತೆಗಳ ಮೇಲೆಯೂ ಬಿತ್ತು.

ಪ್ರಕಟನೆ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी