ಆದಿಕಾಂಡ 3:8

ಆಗ ಕರ್ತನಾದ ದೇವರು ದಿನದ ತಂಗಾಳಿಯಲ್ಲಿ ತೋಟದೊಳಗೆ ತಿರುಗಾಡುವ ಶಬ್ದವನ್ನು ಆದಾಮನೂ ಅವನ ಹೆಂಡತಿಯೂ ಕೇಳಿ ದೇವರಾದ ಕರ್ತನ ಸನ್ನಿಧಿಯಿಂದ ತೋಟದ ಮರಗಳಲ್ಲಿ ಅಡಗಿಕೊಂಡರು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 3

6ಸ್ತ್ರೀಯು--ಆ ಮರದ ಫಲವು ಆಹಾರಕ್ಕೆ ಒಳ್ಳೇದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಒಬ್ಬನನ್ನು ಜ್ಞಾನಿಯನ್ನಾಗಿ ಮಾಡುವದಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಅದೆ ಎಂದು ನೋಡಿ ಅದರ ಫಲವನ್ನು ತೆಗೆದುಕೊಂಡು ತಿಂದಳು; ತನ್ನ ಸಂಗಡ ಇದ್ದ ತನ್ನ ಗಂಡನಿಗೂ ಕೊಟ್ಟಳು; ಅವನೂ ತಿಂದನು.

7ಆಗ ಅವರಿಬ್ಬರ ಕಣ್ಣುಗಳು ತೆರೆಯಲ್ಪಟ್ಟು ತಾವು ಬೆತ್ತಲೆಯಾಗಿದ್ದೇವೆಂದು ತಿಳಿದು ಕೊಂಡರು; ಅವರು ಅಂಜೂರದ ಎಲೆಗಳನ್ನು ಹೊಲಿದುಕೊಂಡು ತಮಗೆ ತಾವೇ ಉಡುಗೆಗಳನ್ನು ಮಾಡಿಕೊಂಡರು.

8ಆಗ ಕರ್ತನಾದ ದೇವರು ದಿನದ ತಂಗಾಳಿಯಲ್ಲಿ ತೋಟದೊಳಗೆ ತಿರುಗಾಡುವ ಶಬ್ದವನ್ನು ಆದಾಮನೂ ಅವನ ಹೆಂಡತಿಯೂ ಕೇಳಿ ದೇವರಾದ ಕರ್ತನ ಸನ್ನಿಧಿಯಿಂದ ತೋಟದ ಮರಗಳಲ್ಲಿ ಅಡಗಿಕೊಂಡರು.

9ಆಗ ಕರ್ತನಾದ ದೇವರು ಆದಾಮನನ್ನು ಕರೆದು ಅವನಿಗೆ--ನೀನು ಎಲ್ಲಿದ್ದೀ ಅಂದನು.

10ಅದಕ್ಕ ವನು--ನಿನ್ನ ಶಬ್ದವನ್ನು ತೋಟದಲ್ಲಿ ನಾನು ಕೇಳಿ ಬೆತ್ತಲೆಯಾಗಿರುವದರಿಂದ ಭಯಪಟ್ಟು ಅಡಗಿ ಕೊಂಡೆನು ಅಂದನು.

ಆದಿಕಾಂಡ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी