ಯೋಹಾನನು 7:39

(ಆದರೆ ಆತನು ತನ್ನಲ್ಲಿ ವಿಶ್ವಾಸವಿಡುವವರು ಹೊಂದಲಿರುವ ಆತ್ಮನನ್ನು ಕುರಿತು ಇದನ್ನು ಹೇಳಿದನು; ಯಾಕಂದರೆ ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ್ದರಿಂದ ಪವಿತ್ರಾ ತ್ಮನು ಇನ್ನೂ ಕೊಡಲ್ಪಟ್ಟಿರಲಿಲ್ಲ.)

ಸಂದರ್ಭದೊಂದಿಗೆ ಓದಿ · ಯೋಹಾನನು 7

37ಹಬ್ಬದ ಆ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು--ಯಾವನಿಗಾದರೂ ನೀರಡಿಕೆ ಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.

38ನನ್ನ ಮೇಲೆ ನಂಬಿಕೆ ಇಡುವವನಿಗೆ ಬರಹವು ಹೇಳಿದ ಪ್ರಕಾರ ಆತನ ಹೊಟ್ಟೆಯೊಳಗಿಂದ ಜೀವ ಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು.

39(ಆದರೆ ಆತನು ತನ್ನಲ್ಲಿ ವಿಶ್ವಾಸವಿಡುವವರು ಹೊಂದಲಿರುವ ಆತ್ಮನನ್ನು ಕುರಿತು ಇದನ್ನು ಹೇಳಿದನು; ಯಾಕಂದರೆ ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ್ದರಿಂದ ಪವಿತ್ರಾ ತ್ಮನು ಇನ್ನೂ ಕೊಡಲ್ಪಟ್ಟಿರಲಿಲ್ಲ.)

40ಆದದರಿಂದ ಜನರಲ್ಲಿ ಅನೇಕರು ಈ ಮಾತನ್ನು ಕೇಳಿದಾಗ--ಈತನು ನಿಜವಾಗಿಯೂ ಆ ಪ್ರವಾದಿ ಯಾಗಿದ್ದಾನೆ ಅಂದರು.

41ಬೇರೆಯವರು--ಈತನೇ ಆ ಕ್ರಿಸ್ತನು ಅಂದರು. ಆದರೆ ಕೆಲವರು--ಕ್ರಿಸ್ತನು ಗಲಿಲಾಯದಿಂದ ಬರುವನೋ?

ಯೋಹಾನನು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी