ಆದರೆ ನೀವು ಪವಿತ್ರನಾಗಿರುವಾತನಿಂದ ಅಭಿಷೇಕವನ್ನು ಹೊಂದಿದ ವರಾಗಿದ್ದು ಎಲ್ಲವನ್ನು ತಿಳಿದವರಾಗಿದ್ದೀರಿ.
18ಚಿಕ್ಕ ಮಕ್ಕಳೇ, ಇದು ಕಡೇ ಗಳಿಗೆಯಾಗಿದೆ;ಕ್ರಿಸ್ತವಿರೋಧಿಯು ಬರುತ್ತಾನೆಂದು ನೀವು ಕೇಳಿದ ಪ್ರಕಾರ ಈಗಲೂ ಕ್ರಿಸ್ತ ವಿರೋಧಿಗಳು ಬಹುಮಂದಿ ಇದ್ದಾರೆ; ಇದರಿಂದ ಇದು ಕಡೇ ಗಳಿಗೆಯಾಗಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ.
19ಅವರು ನಮ್ಮಿಂದ ಹೊರಟುಹೋದರು; ಆದರೆ ಅವರು ನಮ್ಮವ ರಾಗಿರಲಿಲ್ಲ. ಯಾಕಂದರೆ ಅವರು ನಮ್ಮವರಾಗಿದ್ದರೆ ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟು ಹೋದದರಿಂದ ಅವರೆಲ್ಲರೂ ನಮ್ಮವರಲ್ಲವೆಂಬದು ತೋರಿಬಂತು.
20ಆದರೆ ನೀವು ಪವಿತ್ರನಾಗಿರುವಾತನಿಂದ ಅಭಿಷೇಕವನ್ನು ಹೊಂದಿದ ವರಾಗಿದ್ದು ಎಲ್ಲವನ್ನು ತಿಳಿದವರಾಗಿದ್ದೀರಿ.
21ನೀವು ಸತ್ಯವನ್ನು ತಿಳಿಯದವರೆಂತಲ್ಲ, ನೀವು ಅದನ್ನು ತಿಳಿದಿರು ವದರಿಂದಲೂ ಯಾವ ಸುಳ್ಳೂ ಸತ್ಯಕ್ಕೆ ಸಂಬಂಧವಾದ ದ್ದಲ್ಲವೆಂದು ನೀವು ತಿಳಿದವರಾಗಿರುವದರಿಂದಲೂ ನಿಮಗೆ ಬರೆದೆನು.
22ಯೇಸುವು ಕ್ರಿಸ್ತನೆಂದು ಅಲ್ಲಗಳೆಯುವವನೇ ಹೊರತು ಸುಳ್ಳುಗಾರನು ಯಾರು? ತಂದೆಯನ್ನೂ ಮಗನನ್ನೂ ಅಲ್ಲಗಳೆಯುವವನೇ ಕ್ರಿಸ್ತವಿರೋಧಿ ಯಾಗಿದ್ದಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ