ಧರ್ಮೋಪದೇಶಕಾಂಡ 32:40

ನಾನು ಆಕಾಶಕ್ಕೆ ನನ್ನ ಕೈಯನ್ನು ಎತ್ತಿ--ನಾನು ನಿತ್ಯವಾಗಿ ಬದುಕುತ್ತೇನೆಂದು ಹೇಳುತ್ತೇನೆ.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 32

38ಅವರ ಬಲಿಗಳ ಕೊಬ್ಬನ್ನು ತಿಂದಂಥ, ಅವರ ಪಾನದ ಅರ್ಪಣೆಗಳ ದ್ರಾಕ್ಷಾರಸ ಕುಡಿದಂಥ ಅವರ ಬಂಡೆಯು ಎಲ್ಲಿ? ಅವರು ಎದ್ದು ನಿಮಗೆ ಸಹಾಯ ಮಾಡಲಿ; ನಿಮಗೋಸ್ಕರ ಕಾವಲಾಗಲಿ.

39ನಾನು ಆತನೇ ಎಂದೂ ನನ್ನ ಹಾಗೆ ಬೇರೆ ದೇವರಿಲ್ಲವೆಂದೂ ಈಗ ನೋಡಿರಿ; ನಾನೇ ಸಾಯಿಸು ತ್ತೇನೆ, ಬದುಕಿಸುತ್ತೇನೆ; ಗಾಯ ಮಾಡುತ್ತೇನೆ, ನಾನೇ ಸ್ವಸ್ಥ ಮಾಡುತ್ತೇನೆ. ನನ್ನ ಕೈಯಿಂದ ತಪ್ಪಿಸುವವನು ಯಾರೂ ಇಲ್ಲ.

40ನಾನು ಆಕಾಶಕ್ಕೆ ನನ್ನ ಕೈಯನ್ನು ಎತ್ತಿ--ನಾನು ನಿತ್ಯವಾಗಿ ಬದುಕುತ್ತೇನೆಂದು ಹೇಳುತ್ತೇನೆ.

41ನಾನು ಮಿಂಚುವ ಕತ್ತಿಯನ್ನು ಹದಮಾಡುವಾಗ, ನನ್ನ ಕೈ ನ್ಯಾಯವನ್ನು ಹಿಡುಕೊಳ್ಳುವಾಗ, ನನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ ನನ್ನನ್ನು ಹಗೆಮಾಡುವವರಿಗೆ ಮುಯ್ಯಿ ತೀರಿಸುವೆನು.

42ಸತ್ತವರ ಮತ್ತು ಸೆರೆಯವರ ರಕ್ತದಿಂದಲೂ ಆರಂಭದ ಶತ್ರುವಿನ ಪ್ರತೀಕಾರದಿಂದಲೂ ನನ್ನ ಬಾಣಗಳನ್ನು ರಕ್ತದಿಂದ ಅಮಲೇರುವಂತೆ ಮಾಡು ವೆನು. ನನ್ನ ಕತ್ತಿ ಮಾಂಸವನ್ನು ತಿನ್ನುವದು.

ಧರ್ಮೋಪದೇಶಕಾಂಡ 32 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी