ನಿನ್ನ ವರ್ತಕರನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಿ ಸಿದ್ದೀ; ನಾಶಕ ಹುಳವು ನಾಶಮಾಡಿ ಹಾರಿಹೋಗು ತ್ತದೆ.
14ಮುತ್ತಿಗೆಗೋಸ್ಕರ ನೀರನ್ನು ಸೇದು ನಿನ್ನ ಬಲವಾದ ಕೋಟೆಗಳನ್ನು ಭದ್ರ ಮಾಡು; ಕೆಸರಿನಲ್ಲಿ ಸೇರು ಮಣ್ಣನ್ನು ತುಳಿ, ಇಟ್ಟಿಗೆ ಗೂಡನ್ನು ಬಲಪಡಿಸು.
15ಅಲ್ಲೇ ಬೆಂಕಿ ನಿನ್ನನ್ನು ನುಂಗುವದು; ಕತ್ತಿಯು ನಿನ್ನನ್ನು ಕಡಿದುಬಿಡುವದು; ನಾಶಕ ಹುಳದಂತೆ ಅದು ನಿನ್ನನ್ನು ತಿಂದುಬಿಡುವದು; ನಾಶಕ ಹುಳದಂತೆ ಬಹು ಮಂದಿಯಾಗು; ಮಿಡತೆಗಳಂತೆ ಬಹು ಮಂದಿಯಾಗು.
16ನಿನ್ನ ವರ್ತಕರನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಿ ಸಿದ್ದೀ; ನಾಶಕ ಹುಳವು ನಾಶಮಾಡಿ ಹಾರಿಹೋಗು ತ್ತದೆ.
17ನಿನ್ನ ಕಿರೀಟಧಾರಿಗಳು ಮಿಡತೆಗಳ ಹಾಗೆಯೂ ನಿನ್ನ ಅಧಿಪತಿಗಳು ತಂಪಾದ ದಿನದಲ್ಲಿ ಬೇಲಿಗಳೊಳಗೆ ಇಳುಕೊಳ್ಳುವ ದೊಡ್ಡ ಮಿಡತೆಗಳ ಹಾಗೆಯೂ ಇದ್ದಾರೆ; ಸೂರ್ಯನು ಹುಟ್ಟುವಾಗ ಹಾರಿಹೋಗು ತ್ತವೆ; ಆಗ ಅವು ಎಲ್ಲಿರುವವೆಂದು ಅವುಗಳ ಸ್ಥಳವು ತಿಳಿಯುವದಿಲ್ಲ;
18ಅಶ್ಶೂರ್ಯದ ಅರಸನೇ, ನಿನ್ನ ಕುರುಬರು ತೂಕಡಿಸುತ್ತಾರೆ, ನಿನ್ನ ಶ್ರೇಷ್ಠರು ಧೂಳಿನಲ್ಲಿ ಬಿದ್ದಿದ್ದಾರೆ; ನಿನ್ನ ಜನರು ಬೆಟ್ಟಗಳಲ್ಲಿ ಚದರಿ ಹೋಗಿ ದ್ದಾರೆ; ಕೂಡಿಸುವವರು ಯಾರೂ ಇಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ