ಧರ್ಮೋಪದೇಶಕಾಂಡ 28:23

ನಿನ್ನ ತಲೆಯ ಮೇಲಿರುವ ಆಕಾಶವು ತಾಮ್ರ ವಾಗಿಯೂ ನಿನ್ನ ಕೆಳಗಿರುವ ಭೂಮಿಯು ಕಬ್ಬಿಣ ವಾಗಿಯೂ ಇರುವವು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 28

21ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿಂದ ಹಾಳಾಗಿ ಹೋಗುವ ವರೆಗೆ ವ್ಯಾಧಿಯು ನಿನಗೆ ಅಂಟಿಕೊಳ್ಳುವಂತೆ ಕರ್ತನು ಮಾಡುವನು.

22ಕ್ಷಯರೋಗದಿಂದಲೂ ಜ್ವರದಿಂದಲೂ ಉರಿಪಾತ ದಿಂದಲೂ ಮಹಾತಾಪದಿಂದಲೂ ಕತ್ತಿಯಿಂದಲೂ ಕಾಡಿಗೆಯಿಂದಲೂ ಬಾಣಂತಿ ರೋಗದಿಂದಲೂ ಕರ್ತನು ನಿನ್ನನ್ನು ಹೊಡೆಯುವನು; ನೀನು ನಾಶ ವಾಗುವ ಪರ್ಯಂತರ ಅವು ನಿನ್ನನ್ನು ಹಿಂದಟ್ಟುವವು.

23ನಿನ್ನ ತಲೆಯ ಮೇಲಿರುವ ಆಕಾಶವು ತಾಮ್ರ ವಾಗಿಯೂ ನಿನ್ನ ಕೆಳಗಿರುವ ಭೂಮಿಯು ಕಬ್ಬಿಣ ವಾಗಿಯೂ ಇರುವವು.

24ಕರ್ತನು ನಿನ್ನ ದೇಶದ ಮಳೆಯನ್ನು ಹುಡಿಯೂ ಧೂಳೂ ಆಗುವಂತೆ ಮಾಡು ವನು; ನೀನು ನಾಶವಾಗುವ ವರೆಗೆ ಅದು ಆಕಾಶದಿಂದ ನಿನ್ನ ಮೇಲೆ ಇಳಿದು ಬರುವದು.

25ಕರ್ತನು ನಿನ್ನನ್ನು ನಿನ್ನ ಶತ್ರುಗಳ ಮುಂದೆ ಹೊಡೆದುಬಿಡುವನು; ನೀನು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗಿ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಿ.

ಧರ್ಮೋಪದೇಶಕಾಂಡ 28 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी