ಆದಿಕಾಂಡ 18:7

ಅಬ್ರಹಾ ಮನು ದನದ ಮಂದೆಯ ಬಳಿಗೆ ಓಡಿಹೋಗಿ ಎಳೇದಾದ ಒಳ್ಳೇ ಕರುವನ್ನು ತೆಗೆದುಕೊಂಡು ಒಬ್ಬ ಯೌವನಸ್ಥನಿಗೆ ಕೊಟ್ಟಾಗ ಅವನು ಅದನ್ನು ಸಿದ್ಧಮಾಡುವದಕ್ಕೆ ತ್ವರೆಪಟ್ಟನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 18

5ನಾನು ಒಂದಿಷ್ಟು ರೊಟ್ಟಿಯನ್ನು ತರುವೆನು; ನೀವು ನಿಮ್ಮ ಹೃದಯಗಳನ್ನು ಆದರಿಸಿಕೊಳ್ಳಿರಿ; ತರುವಾಯ ನೀವು ಮುಂದೆ ಹೊರಟು ಹೋಗಬಹುದು. ಅದಕ್ಕೋಸ್ಕರವೇ ನೀವು ನಿಮ್ಮ ದಾಸನ ಬಳಿಗೆ ಬಂದಿದ್ದೀರಿ ಎಂದು ಬೇಡಿಕೊಂಡನು. ಅದಕ್ಕೆ ಅವರು--ನೀನು ಹೇಳಿದಂತೆಯೇ ಮಾಡು ಅಂದರು.

6ಆಗ ಅಬ್ರಹಾಮನು ತ್ವರೆಯಾಗಿ ಗುಡಾರದಲ್ಲಿದ್ದ ಸಾರಳ ಬಳಿಗೆ ಹೋಗಿ--ತ್ವರೆಪಟ್ಟು ಮೂರು ಸೇರು ನಯವಾದ ಹಿಟ್ಟು ನಾದಿ ಒಲೆಯ ಮೇಲೆ ರೊಟ್ಟಿಗಳನ್ನು ಮಾಡು ಅಂದನು.

7ಅಬ್ರಹಾ ಮನು ದನದ ಮಂದೆಯ ಬಳಿಗೆ ಓಡಿಹೋಗಿ ಎಳೇದಾದ ಒಳ್ಳೇ ಕರುವನ್ನು ತೆಗೆದುಕೊಂಡು ಒಬ್ಬ ಯೌವನಸ್ಥನಿಗೆ ಕೊಟ್ಟಾಗ ಅವನು ಅದನ್ನು ಸಿದ್ಧಮಾಡುವದಕ್ಕೆ ತ್ವರೆಪಟ್ಟನು.

8ತರುವಾಯ ಬೆಣ್ಣೆಯನ್ನೂ ಹಾಲನ್ನೂ ಪಕ್ವಮಾಡಿದ ಕರುವನ್ನೂ ತೆಗೆದುಕೊಂಡು ಅವರ ಮುಂದೆ ಇಟ್ಟನು; ಅವನು ಮರದ ಕೆಳಗೆ ಅವರ ಬಳಿಯಲ್ಲಿ ನಿಂತುಕೊಂಡನು; ಅವರು ಊಟಮಾಡಿದರು.

9ಆಗ ಅವರು ಅವನಿಗೆ--ನಿನ್ನ ಹೆಂಡತಿಯಾದ ಸಾರಳು ಎಲ್ಲಿ ಎಂದು ಅವನನ್ನು ಕೇಳಲು ಅವನು-- ಇಗೋ, ಗುಡಾರದಲ್ಲಿದ್ದಾಳೆ ಅಂದನು.

ಆದಿಕಾಂಡ 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी