೧ ಸಮುವೇಲನು 10:11

ಅದಕ್ಕೆ ಮುಂಚೆ ಅವನನ್ನು ತಿಳಿದವರೆಲ್ಲರು ಅವನು ಪ್ರವಾದಿಗಳ ಸಂಗಡ ಇದ್ದು ಪ್ರವಾದಿಸುವದನ್ನು ಕಂಡಾಗ ಅವರು ಒಬ್ಬರ ಸಂಗಡ ಒಬ್ಬರು--ಕೀಷನ ಮಗನಿಗೆ ಬಂದದ್ದು ಇದೇನು? ಸೌಲನೂ ಸಹ ಪ್ರವಾದಿಗಳಲ್ಲಿ ಇದ್ದಾನೋ ಅಂದರು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 10

9ಅವನು ಸಮುವೇಲನನ್ನು ಬಿಟ್ಟುಹೋಗಲು ಹಿಂದಿರುಗಿದಾಗ ಏನಾಯಿತಂದರೆ, ದೇವರು ಅವನಿಗೆ ಬೇರೆ ಹೃದಯವನ್ನು ಕೊಟ್ಟನು; ಆ ಸಮಸ್ತ ಗುರುತುಗಳು ಆ ದಿವಸದಲ್ಲಿ ಅವನಿಗೆ ಸಂಭವಿಸಿದವು.

10ಅವನು ಆ ಗುಡ್ಡಕ್ಕೆ ಬಂದಾಗ ಇಗೋ, ಪ್ರವಾದಿಗಳ ಗುಂಪು ಅವನೆದುರಿಗೆ ಬಂತು; ಆಗ ದೇವರ ಆತ್ಮನು ಅವನ ಮೇಲೆ ಬಂದದರಿಂದ ಅವನು ಪ್ರವಾದಿಸಿದನು.

11ಅದಕ್ಕೆ ಮುಂಚೆ ಅವನನ್ನು ತಿಳಿದವರೆಲ್ಲರು ಅವನು ಪ್ರವಾದಿಗಳ ಸಂಗಡ ಇದ್ದು ಪ್ರವಾದಿಸುವದನ್ನು ಕಂಡಾಗ ಅವರು ಒಬ್ಬರ ಸಂಗಡ ಒಬ್ಬರು--ಕೀಷನ ಮಗನಿಗೆ ಬಂದದ್ದು ಇದೇನು? ಸೌಲನೂ ಸಹ ಪ್ರವಾದಿಗಳಲ್ಲಿ ಇದ್ದಾನೋ ಅಂದರು.

12ಅದಕ್ಕೆ ಅಲ್ಲಿಯವನೊಬ್ಬನು ಪ್ರತ್ಯುತ್ತರವಾಗಿ--ಇವರ ತಂದೆ ಯಾರು ಅಂದನು. ಆದದರಿಂದ ಸೌಲನು ಸಹ ಪ್ರವಾದಿಗಳಲ್ಲಿ ಇದ್ದಾನೋ ಎಂಬ ಸಾಮತಿ ಉಂಟಾ ಯಿತು.

13ಅವನು ಪ್ರವಾದಿಸಿ ತೀರಿಸಿದ ತರುವಾಯ ಗುಡ್ಡದ ಮೇಲಕ್ಕೆ ಬಂದನು.

೧ ಸಮುವೇಲನು 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी