ಆಮೋಸ 9:4

ಅವರು ತಮ್ಮ ಶತ್ರುಗಳ ಮುಂದೆ ಸೆರೆಗೆ ಹೋದರೂ ಅಲ್ಲಿಯೂ ನಾನು ಕತ್ತಿಗೆ ಅಪ್ಪಣೆ ಕೊಡುವೆನು; ಅದು ಅವರನ್ನು ಕೊಲ್ಲುವದು. ಮೇಲಿಗಾಗಿ ಅಲ್ಲ, ಕೇಡಿಗಾಗಿ ಅವರ ಮೇಲೆ ನನ್ನ ದೃಷ್ಟಿಯಿಡುವೆನು.

ಸಂದರ್ಭದೊಂದಿಗೆ ಓದಿ · ಆಮೋಸ 9

2ಅವರು ನರಕದ ವರೆಗೂ ತೋಡಿ ಕೊಂಡು ಹೋದರೂ ನನ್ನ ಕೈ ಅವರನ್ನು ಅಲ್ಲಿಂದ ಹಿಡಿದೆಳೆಯುವದು. ಅವರು ಆಕಾಶಕ್ಕೆ ಏರಿ ಹೋದರೂ ನಾನು ಅವರನ್ನು ಅಲ್ಲಿಂದ ಕೆಳಗೆ ಇಳಿಸುವೆನು.

3ಅವರು ಕರ್ಮೆಲಿನ ಬೆಟ್ಟದ ಕೊನೆಯಲ್ಲಿ ಅಡಗಿಕೊಂಡರೂ ನಾನು ಅವರನ್ನು ಹುಡುಕಿ ಅಲ್ಲಿಂದ ತೆಗೆಯುವೆನು; ಅವರು ನನ್ನ ಕಣ್ಣುಗಳಿಗೆ ಮರೆಯಾಗಿ ಸಮುದ್ರದ ತಳದಲ್ಲಿ ಅಡಗಿಕೊಂಡರೂ ಸರ್ಪಕ್ಕೆ ಅಪ್ಪಣೆಕೊಟ್ಟು ಅದು ಅವರನ್ನು ಅಲ್ಲೇ ಕಚ್ಚುವಂತೆ ಮಾಡುವೆನು.

4ಅವರು ತಮ್ಮ ಶತ್ರುಗಳ ಮುಂದೆ ಸೆರೆಗೆ ಹೋದರೂ ಅಲ್ಲಿಯೂ ನಾನು ಕತ್ತಿಗೆ ಅಪ್ಪಣೆ ಕೊಡುವೆನು; ಅದು ಅವರನ್ನು ಕೊಲ್ಲುವದು. ಮೇಲಿಗಾಗಿ ಅಲ್ಲ, ಕೇಡಿಗಾಗಿ ಅವರ ಮೇಲೆ ನನ್ನ ದೃಷ್ಟಿಯಿಡುವೆನು.

5ಸೈನ್ಯಗಳ ದೇವರಾದ ಕರ್ತನೇ, ದೇಶವನ್ನು ಮುಟ್ಟಿದ ಮಾತ್ರಕ್ಕೆ ಅದು ಕರಗಿ ಹೋಗುವದು. ಅದರಲ್ಲಿ ವಾಸವಾಗಿರುವವರೆಲ್ಲರೂ ಗೋಳಾಡುವರು. ಅವೆಲ್ಲಾ ನದಿಯ ಹಾಗೆ ಪ್ರವಾಹದಂತೆ ಉಕ್ಕಿ, ಐಗುಪ್ತದ ಪ್ರವಾಹದಂತೆ ಉಕ್ಕಿ ಮುಳುಗಿ ಹೋಗುವದು.

6ಆಕಾಶದಲ್ಲಿ ಉಪ್ಪರಿಗೆ ಗಳನ್ನು ಕಟ್ಟಿಕೊಂಡು ಭೂಮಿಯ ಮೇಲೆ ತಮ ತಂಡಗಳನ್ನು ಸ್ಥಾಪಿಸಿ ಸಮುದ್ರದ ನೀರನ್ನು ಕರೆದು ಅದನ್ನು ಭೂಮಿಯ ಮೇಲೆ ಒಯ್ಯುವಂತೆ ಮಾಡು ವವನು ಆತನೇ. ಆತನ ಹೆಸರು ಕರ್ತನು.

ಆಮೋಸ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी