ಯೆಹೆಜ್ಕೇಲನು 21:28

ಮನುಷ್ಯಪುತ್ರನೇ, ನೀನು ಪ್ರವಾದಿಸಿ ಹೇಳ ಬೇಕಾದದ್ದೇನಂದರೆ--ದೇವರಾದ ಕರ್ತನು ಅಮ್ಮೋನಿ ಯರ ವಿಷಯವಾಗಿಯೂ ಅವರ ನಿಂದೆಯ ವಿಷಯವಾಗಿಯೂ ಹೀಗೆ ಹೇಳುತ್ತಾನೆ--ಹೌದು, ನೀನು ಹೀಗೆ ಹೇಳು, ಹಿರಿದ ಕತ್ತಿಯು ಥಳಥಳಿಸುವದ ರಿಂದ ಸಂಹರಿಸುವದಕ್ಕೆ ಹಿಡಿದಿದೆ; ಮಿಂಚುವಂತೆ ಬಹಳವಾಗಿ ಮಸೆದಿದೆ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 21

26ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಮುಂಡಾಸವನ್ನು ಎತ್ತಿಡು, ಕಿರೀಟವನ್ನು ತೆಗೆದುಹಾಕು; ಅದು ಹಾಗೆಯೇ ಇರುವದಿಲ್ಲ; ತಗ್ಗಿಸಲ್ಪಟ್ಟವನನ್ನು ಹೆಚ್ಚಿಸಿ ಹೆಚ್ಚಿಸಲ್ಪಟ್ಟವನನ್ನು ತಗ್ಗಿಸು.

27ನಾನು ತಳ್ಳಿಬಿಡು ವೆನು, ತಳ್ಳಿಬಿಡುವೆನು, ಅದನ್ನು ತಳ್ಳಿಬಿಡುವೆನು; ನ್ಯಾಯ ಯಾರದು? ಅವನು ಬರುವ ವರೆಗೂ ಇದು ಇರುವದಿಲ್ಲ; ನಾನು ಅವನಿಗೆ ಇದನ್ನು ಕೊಟ್ಟು ಬಿಡುತ್ತೇನೆ.

28ಮನುಷ್ಯಪುತ್ರನೇ, ನೀನು ಪ್ರವಾದಿಸಿ ಹೇಳ ಬೇಕಾದದ್ದೇನಂದರೆ--ದೇವರಾದ ಕರ್ತನು ಅಮ್ಮೋನಿ ಯರ ವಿಷಯವಾಗಿಯೂ ಅವರ ನಿಂದೆಯ ವಿಷಯವಾಗಿಯೂ ಹೀಗೆ ಹೇಳುತ್ತಾನೆ--ಹೌದು, ನೀನು ಹೀಗೆ ಹೇಳು, ಹಿರಿದ ಕತ್ತಿಯು ಥಳಥಳಿಸುವದ ರಿಂದ ಸಂಹರಿಸುವದಕ್ಕೆ ಹಿಡಿದಿದೆ; ಮಿಂಚುವಂತೆ ಬಹಳವಾಗಿ ಮಸೆದಿದೆ.

29ನಿನ್ನ ಜೋಯಿಸರು ವ್ಯರ್ಥವಾದದ್ದನ್ನು ನೋಡಿ ಸಾಕ್ಷಾತ್ಕರಿಸಿ ಸುಳ್ಳಾಗಿ ಶಕುನ ಹೇಳುತ್ತಿದ್ದಾರೆ, ಹೀಗೆ ನಿನ್ನನ್ನು ಹತವಾದ ದುಷ್ಟರ ಕುತ್ತಿಗೆಗಳ ಮೇಲೆ ತಂದಿದ್ದಾರೆ. ಅವರ ಅಂತ್ಯದಿನವು ಬಂದಿದೆ; ಅದೇ ಅವರ ಅಕ್ರಮಗಳಿಗೆ ಅಂತ್ಯವಾಗಿದೆ.

30ಅದನ್ನು ನಾನು ಮತ್ತೆ ಒರೆಗೆ ಸೇರಿಸುವೆನೋ? ನೀನು ನಿರ್ಮಿಸಲ್ಪಟ್ಟ ಸ್ಥಳದಲ್ಲಿಯೇ ನೀನು ಹುಟ್ಟಿದ ಸ್ಥಳದಲ್ಲಿಯೇ ನಿನಗೆ ನ್ಯಾಯತೀರಿಸುವೆನು.

ಯೆಹೆಜ್ಕೇಲನು 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी