ಅರಸನು ದೇವರ ಮನುಷ್ಯನಿಗೆ--ನೀನು ನನ್ನ ಕೂಡ ಮನೆಗೆ ಬಂದು ನಿನ್ನನ್ನು ಚೇತರಿಸಿಕೋ. ನಾನು ನಿನಗೆ ಒಂದು ಬಹುಮಾನ ಕೊಡುವೆನು ಅಂದನು.
5ಇದಲ್ಲದೆ ಕರ್ತನ ಮಾತಿನಿಂದ ದೇವರ ಮನುಷ್ಯನು ಕೊಟ್ಟ ಗುರುತಿನ ಪ್ರಕಾರವೇ ಬಲಿ ಪೀಠವು ಸೀಳಿ ಹೋಗಿ ಬೂದಿಯು ಬಲಿಪೀಠದಿಂದ ಚೆಲ್ಲಲ್ಪಟ್ಟಿತು.
6ಆಗ ಅರಸನು ಪ್ರತ್ಯುತ್ತರವಾಗಿ ದೇವರ ಮನು ಷ್ಯನಿಗೆ--ನನ್ನ ಕೈ ಗುಣವಾಗುವ ಹಾಗೆ ನೀನು ನಿನ್ನ ದೇವರಾದ ಕರ್ತನ ಕಟಾಕ್ಷವನ್ನು ಬೇಡಿಕೊಂಡು ನನಗೋಸ್ಕರ ಪ್ರಾರ್ಥನೆ ಮಾಡು ಅಂದನು. ಆಗ ದೇವರ ಮನುಷ್ಯನು ಕರ್ತನ ಕಟಾಕ್ಷವನ್ನು ಬೇಡಿಕೊಂಡ ದ್ದರಿಂದ ಅರಸನ ಕೈ ಗುಣವಾಗಿ ಮುಂಚಿನ ಹಾಗೆ ಆಯಿತು.
7ಅರಸನು ದೇವರ ಮನುಷ್ಯನಿಗೆ--ನೀನು ನನ್ನ ಕೂಡ ಮನೆಗೆ ಬಂದು ನಿನ್ನನ್ನು ಚೇತರಿಸಿಕೋ. ನಾನು ನಿನಗೆ ಒಂದು ಬಹುಮಾನ ಕೊಡುವೆನು ಅಂದನು.
8ಆದರೆ ದೇವರ ಮನುಷ್ಯನು ಅರಸನಿಗೆ ಪ್ರತ್ಯುತ್ತರವಾಗಿ--ನೀನು ನನಗೆ ನಿನ್ನ ಅರ್ಧ ಮನೆ ಯನ್ನು ಕೊಟ್ಟರೂ ನಾನು ನಿನ್ನ ಸಂಗಡ ಹೋಗುವದಿಲ್ಲ; ಈ ಸ್ಥಳದಲ್ಲಿ ರೊಟ್ಟಿ ತಿನ್ನುವದಿಲ್ಲ, ಕುಡಿಯುವದಿಲ್ಲ.
9ಯಾಕಂದರೆ--ನೀನು ರೊಟ್ಟಿ ತಿನ್ನಬೇಡ, ನೀರನ್ನು ಕುಡಿಯಬೇಡ; ನೀನು ಬಂದ ಮಾರ್ಗದಿಂದ ಹಿಂತಿ ರುಗಿ ಹೋಗಬೇಡ ಎಂದು ಕರ್ತನ ವಾಕ್ಯದಿಂದ ನನಗೆ ಆಜ್ಞೆ ಆಯಿತು ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ