ಯೆರೆಮಿಯ 3:19

ಆದರೆ ನಾನು--ನಿನ್ನನ್ನು ಮಕ್ಕಳೊಳಗೆ ಇಟ್ಟು ಮನೋಹರವಾದ ದೇಶವನ್ನೂ ಜನಾಂಗಗಳವರ ಸೈನ್ಯಗಳ ರಮ್ಯವಾದ ಸ್ವಾಸ್ತ್ಯವನ್ನೂ ನಿನಗೆ ಕೊಡು ವದು ಹೇಗೆಂದು ನಾನು ಅಂದುಕೊಂಡೆನು; ನಾನು --ನನ್ನ ತಂದೆಯೇ, ನೀನು ನನ್ನನ್ನು ಕರೆದು, ನನ್ನನ್ನು ಬಿಟ್ಟು ತಿರುಗುವದಿಲ್ಲವೆಂದು ಅಂದುಕೊಂಡೆನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 3

17ಆ ಕಾಲದಲ್ಲಿ ಯೆರೂಸಲೇಮು ಕರ್ತನ ಸಿಂಹಾಸನವೆಂದು ಕರೆಯಲ್ಪಡುವದು; ಜನಾಂಗಗ ಳೆಲ್ಲಾ ಅದರ ಬಳಿಗೆ ಕರ್ತನ ಹೆಸರಿನ ಬಳಿಗೆ ಮತ್ತು ಯೆರೂಸಲೇಮಿನೊಳಗೆ ಕೂಡಿಸಲ್ಪಡುವವು; ಇನ್ನು ಮೇಲೆ ತಮ್ಮ ಕೆಟ್ಟ ಹೃದಯದ ಕಲ್ಪನೆಯ ಪ್ರಕಾರ ನಡಕೊಳ್ಳರು.

18ಆ ದಿನಗಳಲ್ಲಿ ಯೆಹೂದದ ಮನೆ ತನವು ಇಸ್ರಾಯೇಲಿನ ಮನೆಯ ಸಂಗಡ ಹೋಗು ವದು; ಅವರು ಏಕವಾಗಿ ಉತ್ತರ ದೇಶದಿಂದ ನಾನು ನಿಮ್ಮ ತಂದೆಗಳಿಗೆ ಸ್ವಾಸ್ತ್ಯವಾಗಿ ಕೊಟ್ಟ ದೇಶಕ್ಕೆ ಬರುವರು.

19ಆದರೆ ನಾನು--ನಿನ್ನನ್ನು ಮಕ್ಕಳೊಳಗೆ ಇಟ್ಟು ಮನೋಹರವಾದ ದೇಶವನ್ನೂ ಜನಾಂಗಗಳವರ ಸೈನ್ಯಗಳ ರಮ್ಯವಾದ ಸ್ವಾಸ್ತ್ಯವನ್ನೂ ನಿನಗೆ ಕೊಡು ವದು ಹೇಗೆಂದು ನಾನು ಅಂದುಕೊಂಡೆನು; ನಾನು --ನನ್ನ ತಂದೆಯೇ, ನೀನು ನನ್ನನ್ನು ಕರೆದು, ನನ್ನನ್ನು ಬಿಟ್ಟು ತಿರುಗುವದಿಲ್ಲವೆಂದು ಅಂದುಕೊಂಡೆನು.

20ನಿಶ್ಚಯವಾಗಿ ಹೆಂಡತಿಯು ತನ್ನ ಗಂಡನನ್ನು ವಂಚಿಸಿ ಬಿಡುವ ಪ್ರಕಾರ ಓ ಇಸ್ರಾಯೇಲಿನ ಮನೆತನದವರೇ, ನನಗೆ ವಂಚನೆ ಮಾಡಿದ್ದೀರಿ ಎಂದು ಕರ್ತನು ಅನ್ನುತ್ತಾನೆ.

21ಉನ್ನತ ಸ್ಥಳಗಳ ಮೇಲೆ ಸ್ವರವು ಕೇಳಲ್ಪಟ್ಟಿತು, ಅವು ಇಸ್ರಾಯೇಲಿನ ಮಕ್ಕಳ ಅಳುವಿಕೆಯ ಬೇಡಿ ಕೆಗಳೇ; ಯಾಕಂದರೆ ತಮ್ಮ ಮಾರ್ಗವನ್ನು ಡೊಂಕು ಮಾಡಿ ತಮ್ಮ ದೇವರಾದ ಕರ್ತನನ್ನು ಮರೆತುಬಿಟ್ಟಿ ದ್ದರು.

ಯೆರೆಮಿಯ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी