ಆಗ ಅವರು ಸಮುದ್ರ ದಡದ ಮರಳಿನ ಹಾಗೆ ಬಹು ಜನರು ಬಹುರಥಗಳ ಕುದುರೆಗಳು ಸಮೂಹವಾಗಿ ತಮ್ಮ ಎಲ್ಲಾ ಸೈನ್ಯಗಳ ಸಂಗಡ ಹೊರಟರು.
2ಪರ್ವತಗಳ ಉತ್ತರ ದಿಕ್ಕಿನಲ್ಲಿಯೂ ಕಿನ್ನೆರೋತಿಗೆ ದಕ್ಷಿಣಕ್ಕಿರುವ ಬೈಲಲ್ಲಿಯೂ ತಗ್ಗುಗಳಲ್ಲಿಯೂ ಪಶ್ಚಿಮದಲ್ಲಿ ದೋರಿನ ಪ್ರಾಂತ್ಯಗಳಲ್ಲಿ ಇರುವ ಅರಸುಗಳ ಬಳಿಗೂ
3ಪೂರ್ವ ಪಶ್ಚಿಮಕ್ಕಿರುವ ಕಾನಾನ್ಯರ ಬಳಿಗೂ ಪರ್ವತಗಳಲ್ಲಿರುವ ಅಮೋರಿ ಯರ, ಹಿತ್ತಿಯರ, ಪೆರಿಜ್ಜೀಯರ, ಯೆಬೂಸಿಯರ ಬಳಿಗೂ ಮಿಚ್ಪೆಯ ದೇಶದಲ್ಲಿ ಹೆರ್ಮೋನ್ ಪರ್ವತದ ಕೆಳ ಭಾಗದಲ್ಲಿರುವ ಹಿವ್ವಿಯರ ಬಳಿಗೂ ಹೇಳಿಕಳುಹಿ ಸಿದನು.
4ಆಗ ಅವರು ಸಮುದ್ರ ದಡದ ಮರಳಿನ ಹಾಗೆ ಬಹು ಜನರು ಬಹುರಥಗಳ ಕುದುರೆಗಳು ಸಮೂಹವಾಗಿ ತಮ್ಮ ಎಲ್ಲಾ ಸೈನ್ಯಗಳ ಸಂಗಡ ಹೊರಟರು.
5ಈ ಅರಸುಗಳೆಲ್ಲಾ ಕೂಡಿಕೊಂಡು ಇಸ್ರಾಯೇಲಿನ ಸಂಗಡ ಯುದ್ಧಮಾಡಲು ಬಂದು ಒಟ್ಟಾಗಿ ಮೇರೋಮು ಎಂಬ ನೀರುಗಳ ಬಳಿಯಲ್ಲಿ ಇಳುಕೊಂಡರು.
6ಆಗ ಕರ್ತನು ಯೆಹೋಶುವನಿಗೆಅವರಿಗೆ ಭಯಪಡಬೇಡ; ನಾಳೆ ಇಷ್ಟು ಹೊತ್ತಿಗೆ ಅವರೆಲ್ಲರನ್ನು ಇಸ್ರಾಯೇಲಿನ ಮುಂದೆ ಕೊಲ್ಲಲ್ಪ ಡುವಂತೆ ಒಪ್ಪಿಸಿಕೊಡುವೆನು. ನೀನು ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯಿದು ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ