ಆದಿಕಾಂಡ 23:8

ಅವರ ಸಂಗಡ ಮಾತನಾಡಿದ್ದೇ ನಂದರೆ--ನಾನು ನನ್ನ ಹೆಂಡತಿಯ ಶವವನ್ನು ನನ್ನೆದುರಿನಿಂದ ಹೂಣಿಡುವದು ನಿಮ್ಮ ಮನಸ್ಸಿಗೆ ಸರಿಬಿದ್ದರೆ ನನ್ನ ಮಾತು ಕೇಳಿ ಚೋಹರನ ಮಗನಾದ ಎಫ್ರೋನನನ್ನು ನನಗಾಗಿ ಬೇಡಿಕೊಳ್ಳಿರಿ.

ಸಂದರ್ಭದೊಂದಿಗೆ ಓದಿ · ಆದಿಕಾಂಡ 23

6ಒಡೆಯನೇ, ನಮ್ಮ ಮಾತನ್ನು ಕೇಳು; ನೀನು ನಮ್ಮ ಮಧ್ಯದಲ್ಲಿ ಮಹಾಪ್ರಭುವಾಗಿದ್ದೀ; ನಮ್ಮ ಸಮಾಧಿಗಳೊಳಗೆ ಉತ್ತಮವಾದದ್ದರಲ್ಲಿ ನಿನ್ನ ಹೆಂಡತಿಯ ಶವವನ್ನು ಹೂಣಿಡು. ನೀನು ನಿನ್ನ ಹೆಂಡತಿಯ ಶವವನ್ನು ಹೂಣಿಡದ ಹಾಗೆ ನಮ್ಮಲ್ಲಿ ಒಬ್ಬನಾದರೂ ತನ್ನ ಸಮಾಧಿಯನ್ನು ಕೊಡುವದಿಲ್ಲ ವೆಂದು ಹೇಳಲಾರನು.

7ಆಗ ಅಬ್ರಹಾಮನು ಎದ್ದು ಹೇತನ ಮಕ್ಕಳಾದ ಆ ದೇಶದ ಜನರ ಮುಂದೆ ಬಾಗಿ

8ಅವರ ಸಂಗಡ ಮಾತನಾಡಿದ್ದೇ ನಂದರೆ--ನಾನು ನನ್ನ ಹೆಂಡತಿಯ ಶವವನ್ನು ನನ್ನೆದುರಿನಿಂದ ಹೂಣಿಡುವದು ನಿಮ್ಮ ಮನಸ್ಸಿಗೆ ಸರಿಬಿದ್ದರೆ ನನ್ನ ಮಾತು ಕೇಳಿ ಚೋಹರನ ಮಗನಾದ ಎಫ್ರೋನನನ್ನು ನನಗಾಗಿ ಬೇಡಿಕೊಳ್ಳಿರಿ.

9ಅವನು ತನ್ನ ಹೊಲದ ಅಂಚಿನಲ್ಲಿರುವ ಮಕ್ಪೇಲ ಗವಿಯನ್ನು ನನಗೆ ಕೊಡಲಿ; ಅವನು ಅದನ್ನು ತಕ್ಕ ಕ್ರಯಕ್ಕೆ ನಿಮ್ಮ ಎದುರಿನಲ್ಲಿ ನನಗೆ ಕೊಡಲಿ ಅಂದನು.

10ಆಗ ಎಫ್ರೋನನು ಹೇತನ ಮಕ್ಕಳ ಮಧ್ಯದಲ್ಲಿ ವಾಸವಾಗಿದ್ದನು. ಹಿತ್ತೀಯನಾದ ಎಫ್ರೋನನು ಅಬ್ರಹಾಮನಿಗೆ ಪ್ರತ್ಯುತ್ತರವಾಗಿ ಅವನ ಪಟ್ಟಣದ ಹೆಬ್ಬಾಗಿಲಿನಲ್ಲಿ ಕೂಡಿಕೊಂಡು ಹೇತನ ಮಕ್ಕಳು ಕೇಳುವಂತೆ ಹೇಳಿದ್ದೇನಂದರೆ--

ಆದಿಕಾಂಡ 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी