ಆದಿಕಾಂಡ 4:22

ಚಿಲ್ಲಾ ಸಹ ತೂಬಲ್‌ಕಾಯಿನನನ್ನು ಹೆತ್ತಳು; ಅವನು ಹಿತ್ತಾಳೆ ಕಬ್ಬಿಣ ಕೆಲಸದ ಕಲೆಯಿದ್ದವರೆಲ್ಲರಿಗೆ ಶಿಕ್ಷಣ ಕೊಡುವವನಾಗಿದ್ದನು. ತೂಬಲ್‌ಕಾಯಿನನ ಸಹೋದರಿ ನಯಮಾ ಎಂಬವಳು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 4

20ಆದಾ ಯಾಬಾಲನನ್ನು ಹೆತ್ತಳು; ಇವನು ಗುಡಾರಗಳಲ್ಲಿ ವಾಸಿಸುವವನಾಗಿ ದನಕರು ಗಳಿದ್ದವರಿಗೆ ತಂದೆಯಾದನು.

21ಅವನ ಸಹೋದರನ ಹೆಸರು ಯೂಬಾಲನು; ಇವನು ಕಿನ್ನರಿಯನ್ನೂ ಕೊಳಲನ್ನೂ ಬಾರಿಸುವವರೆಲ್ಲರಿಗೆ ತಂದೆಯಾದನು.

22ಚಿಲ್ಲಾ ಸಹ ತೂಬಲ್‌ಕಾಯಿನನನ್ನು ಹೆತ್ತಳು; ಅವನು ಹಿತ್ತಾಳೆ ಕಬ್ಬಿಣ ಕೆಲಸದ ಕಲೆಯಿದ್ದವರೆಲ್ಲರಿಗೆ ಶಿಕ್ಷಣ ಕೊಡುವವನಾಗಿದ್ದನು. ತೂಬಲ್‌ಕಾಯಿನನ ಸಹೋದರಿ ನಯಮಾ ಎಂಬವಳು.

23ಲೆಮೆಕನು ತನ್ನ ಹೆಂಡತಿಯರಾದ ಆದಾ ಚಿಲ್ಲಾ ಎಂಬವರಿಗೆ--ಲೆಮೆಕನ ಹೆಂಡತಿಯರೇ, ನನ್ನ ಮಾತನ್ನು ಕೇಳಿರಿ; ನನ್ನ ಮಾತುಗಳಿಗೆ ಕಿವಿಗೊಡಿರಿ; ನನಗೆ ಗಾಯಮಾಡಿದ ಒಬ್ಬ ಮನುಷ್ಯ ನನ್ನು, ನನಗೆ ಹೊಡೆದ ಒಬ್ಬ ಯೌವನಸ್ಥನನ್ನು ಕೊಂದಿದ್ದೇನೆ.

24ಕಾಯಿನನಿಗಾಗಿ ಏಳರಷ್ಟು ಪ್ರತಿದಂಡನೆಯಾದರೆ ಲೆಮೆಕನಿಗಾಗಿ ಏಳೆಪ್ಪತ್ತು ಸಾರಿ ಪ್ರತಿದಂಡನೆ ನಿಜವಾ ಗಿಯೂ ಆಗುವದು.

ಆದಿಕಾಂಡ 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी