ದಾನಿಯೇಲನು 11:6

ವರುಷಗಳ ಅಂತ್ಯದಲ್ಲಿ ಅವರು ಒಬ್ಬರಿಗೊಬ್ಬರು ಒಂದಾಗುವರು; ಹೇಗಂದರೆ ದಕ್ಷಿಣದ ಅರಸನ ಮಗಳು ಉತ್ತರದ ಅರಸನ ಬಳಿಗೆ ಬಂದು ಒಪ್ಪಂದ ಮಾಡಿಕೊಳ್ಳುವಳು; ಆದರೆ ಅವಳು ಭುಜ ಬಲವನ್ನು ಉಳಿಸಿಕೊಳ್ಳುವದಿಲ್ಲ; ಅವನೂ ಅವನ ತೋಳುಗಳೂ ನಿಲ್ಲುವದಿಲ್ಲ; ಅವಳೂ ಅವಳನ್ನು ಕರೆ ತಂದವರೂ ಅವಳನ್ನು ಪಡೆದವನೂ ಆ ಕಾಲದಲ್ಲಿ ಅವಳನ್ನು ಬಲಪಡಿಸಿದವನೂ ಉಳಿಯುವದಿಲ್ಲ.

ಸಂದರ್ಭದೊಂದಿಗೆ ಓದಿ · ದಾನಿಯೇಲನು 11

4ಅವನು ತಲೆ ಎತ್ತಿದ ಮೇಲೆ ಅವನ ರಾಜ್ಯವು ಮುರಿಯಲ್ಪಟ್ಟು ಆಕಾಶದ ನಾಲ್ಕು ದಿಕ್ಕುಗಳ ಕಡೆಗೆ ವಿಭಾಗಿಸಲ್ಪಡುವದು; ಅವನ ಸಂತತಿಗಾಗಿ ಅಲ್ಲ, ಅಥವಾ ಅವನು ಆಳಿದ ಅಧಿಕಾರದ ಹಾಗಲ್ಲ ಅವನ ರಾಜ್ಯವು ಕೀಳಲ್ಪಟ್ಟು ಅವರಿಗಲ್ಲ, ಮತ್ತೊಬ್ಬರಿಗೆ ಹಂಚಲ್ಪಡುವದು.

5ದಕ್ಷಿಣದ ಅರಸನು ಬಲಿಷ್ಠನಾಗಿ ರುವನು. ಆದರೆ ಅವನ ಪ್ರಧಾನರಲ್ಲಿ ಒಬ್ಬನು ಇವನಿ ಗಿಂತ ಬಲಿಷ್ಠನಾಗಿದ್ದು ಅವನ ಆಳ್ವಿಕೆಯು ಮಹಾ ಆಳ್ವಿಕೆಯಾಗುವದು.

6ವರುಷಗಳ ಅಂತ್ಯದಲ್ಲಿ ಅವರು ಒಬ್ಬರಿಗೊಬ್ಬರು ಒಂದಾಗುವರು; ಹೇಗಂದರೆ ದಕ್ಷಿಣದ ಅರಸನ ಮಗಳು ಉತ್ತರದ ಅರಸನ ಬಳಿಗೆ ಬಂದು ಒಪ್ಪಂದ ಮಾಡಿಕೊಳ್ಳುವಳು; ಆದರೆ ಅವಳು ಭುಜ ಬಲವನ್ನು ಉಳಿಸಿಕೊಳ್ಳುವದಿಲ್ಲ; ಅವನೂ ಅವನ ತೋಳುಗಳೂ ನಿಲ್ಲುವದಿಲ್ಲ; ಅವಳೂ ಅವಳನ್ನು ಕರೆ ತಂದವರೂ ಅವಳನ್ನು ಪಡೆದವನೂ ಆ ಕಾಲದಲ್ಲಿ ಅವಳನ್ನು ಬಲಪಡಿಸಿದವನೂ ಉಳಿಯುವದಿಲ್ಲ.

7ಆದರೆ ಅವಳ ಬೇರುಗಳ ಚಿಗುರಿನಿಂದ ಒಬ್ಬನು ಎದ್ದು ಆ ಸ್ಥಾನದಲ್ಲಿ ನಿಂತು ಸೈನ್ಯದೊಂದಿಗೆ ಬಂದು ಉತ್ತರದ ಅರಸನ ಕೋಟೆಯೊಳಗೆ ನುಗ್ಗಿ ಅವರನ್ನು ವಿರೋಧಿಸಿ ಪ್ರಬಲವಾಗುವನು.

8ಅವರ ದೇವರು ಗಳನ್ನೂ ಅವರ ಪ್ರಧಾನರನ್ನೂ ಬೆಳ್ಳಿಬಂಗಾರಗಳ ಪಾತ್ರೆಗಳನ್ನೂ ಸೂರೆಮಾಡಿ ಐಗುಪ್ತದೇಶಕ್ಕೆ ಬಂದು ಉತ್ತರದ ಅರಸನಿಗಿಂತ ಹೆಚ್ಚು ವರುಷಗಳು ಆಳುವನು.

ದಾನಿಯೇಲನು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी