೧ ಸಮುವೇಲನು 10:3

ನೀನು ಆ ಸ್ಥಳವನ್ನು ಬಿಟ್ಟು ಆ ಕಡೆ ದಾಟಿ ತಾಬೋರಿನ ಬಯಲಿಗೆ ಬರುವಾಗ ಒಬ್ಬನು ಮೂರು ಮೇಕೆಯ ಮರಿಗಳನ್ನೂ ಮತ್ತೊಬ್ಬನು ಮೂರು ರೊಟ್ಟಿಗಳನ್ನೂ ಇನ್ನೊಬ್ಬನು ದ್ರಾಕ್ಷಾರಸವಿರುವ ಒಂದು ಬುದ್ದಲಿ ಯನ್ನೂ ಹೊತ್ತುಕೊಂಡು ದೇವರ ಬಳಿಗೆ ಬೇತೇಲಿಗೆ ಹೋಗುವ ಮೂವರನ್ನು ಕಾಣುವಿ.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 10

1ಆಗ ಸಮುವೇಲನು ಎಣ್ಣೆಯ ಪಾತ್ರೆಯನ್ನು ತಕ್ಕೊಂಡು ಅವನ ತಲೆಯ ಮೇಲೆ ಹೊಯ್ದು ಮುದ್ದಿಟ್ಟು ಅವನಿಗೆ--ಕರ್ತನು ನಿನ್ನನ್ನು ತನ್ನ ಬಾಧ್ಯತೆಯ ಮೇಲೆ ನಾಯಕನಾಗಿರಲು ಅಭಿಷೇಕ ಮಾಡಿದ್ದಾನಲ್ಲವೋ?

2ನೀನು ಈ ಹೊತ್ತು ನನ್ನನ್ನು ಬಿಟ್ಟು ಹೋದಾಗ ಬೆನ್ಯಾವಿಾನನ ಮೇರೆಯಾದ ಚೆಲ್ಚಹಿ ನಲ್ಲಿರುವ ರಾಹೇಲಳ ಸಮಾಧಿಯ ಬಳಿಯಲ್ಲಿ ಇಬ್ಬರು ಮನುಷ್ಯರನ್ನು ಕಂಡುಕೊಳ್ಳುವಿ. ಅವರು ನಿನಗೆ--ನೀನು ಹುಡುಕಲು ಹೋದ ಕತ್ತೆಗಳು ಸಿಕ್ಕಿದವು; ಇದಲ್ಲದೆ ಇಗೋ, ನಿನ್ನ ತಂದೆಯು ಕತ್ತೆಗಳ ಚಿಂತೆ ಬಿಟ್ಟು ನಿನಗೋಸ್ಕರ ಚಿಂತೆಪಟ್ಟು--ನನ್ನ ಮಗನಿಗೋ ಸ್ಕರ ಏನು ಮಾಡಲಿ? ಅನ್ನುತ್ತಾನೆಂದು ಹೇಳುವರು.

3ನೀನು ಆ ಸ್ಥಳವನ್ನು ಬಿಟ್ಟು ಆ ಕಡೆ ದಾಟಿ ತಾಬೋರಿನ ಬಯಲಿಗೆ ಬರುವಾಗ ಒಬ್ಬನು ಮೂರು ಮೇಕೆಯ ಮರಿಗಳನ್ನೂ ಮತ್ತೊಬ್ಬನು ಮೂರು ರೊಟ್ಟಿಗಳನ್ನೂ ಇನ್ನೊಬ್ಬನು ದ್ರಾಕ್ಷಾರಸವಿರುವ ಒಂದು ಬುದ್ದಲಿ ಯನ್ನೂ ಹೊತ್ತುಕೊಂಡು ದೇವರ ಬಳಿಗೆ ಬೇತೇಲಿಗೆ ಹೋಗುವ ಮೂವರನ್ನು ಕಾಣುವಿ.

4ಅವರು ನಿನ್ನ ಕ್ಷೇಮ ಸಮಾಚಾರವನ್ನು ವಿಚಾರಿಸಿ ನಿನಗೆ ಎರಡು ರೊಟ್ಟಿಗಳನ್ನು ಕೊಡುವರು; ಅವುಗಳನ್ನು ನೀನು ಅವರ ಕೈಯಿಂದ ತೆಗೆದುಕೊಳ್ಳುವಿ.

5ತರುವಾಯ ಫಿಲಿಷ್ಟಿಯರ ಠಾಣವಿರುವ ದೇವರ ಗುಡ್ಡಕ್ಕೆ ಹೋಗುವಿ. ಅಲ್ಲಿಂದ ನೀನು ಪಟ್ಟಣದಲ್ಲಿ ಪ್ರವೇಶಿಸುವಾಗ ನಿನಗೆದುರಾಗಿ ವೀಣೆ, ದಮ್ಮಡಿ, ಪಿಳ್ಳಂಗೋವಿ, ಕಿನ್ನರಿಗಳನ್ನು ತಮ್ಮ ಮುಂದೆ ಇಟ್ಟುಕೊಂಡವರಾಗಿ ಮೇಲಿನಿಂದ ಇಳಿದು ಬರುವ ಪ್ರವಾದಿಗಳ ಗುಂಪು ಬರುವದು. ಅವರು ಪ್ರವಾದಿಸುವರು.

೧ ಸಮುವೇಲನು 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी