೧ ಪೂರ್ವಕಾಲವೃತ್ತಾಂತ 10:2

ಫಿಲಿಷ್ಟಿಯರು ಸೌಲನನ್ನೂ ಅವನ ಕುಮಾರರನ್ನೂ ಬಿಡದೆ ಹಿಂದಟ್ಟಿದರು; ಫಿಲಿಷ್ಟಿಯರು ಸೌಲನ ಕುಮಾ ರರಾದ ಯೋನಾತಾನನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಕೊಂದುಬಿಟ್ಟರು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 10

1ಫಿಲಿಷ್ಟಿಯರು ಇಸ್ರಾಯೇಲಿನ ಸಂಗಡ ಯುದ್ಧವನ್ನು ಮಾಡಿದರು; ಇಸ್ರಾಯೇ ಲಿನ ಜನರು ಫಿಲಿಷ್ಟಿಯರ ಮುಂದೆ ಓಡಿಹೋಗಿ ಗಿಲ್ಬೋಯ ಬೆಟ್ಟದಲ್ಲಿ ಕೊಲ್ಲಲ್ಪಟ್ಟವರಾಗಿ ಬಿದ್ದರು.

2ಫಿಲಿಷ್ಟಿಯರು ಸೌಲನನ್ನೂ ಅವನ ಕುಮಾರರನ್ನೂ ಬಿಡದೆ ಹಿಂದಟ್ಟಿದರು; ಫಿಲಿಷ್ಟಿಯರು ಸೌಲನ ಕುಮಾ ರರಾದ ಯೋನಾತಾನನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಕೊಂದುಬಿಟ್ಟರು.

3ಯುದ್ಧವು ಸೌಲನ ಮೇಲೆ ಭಾರವಾಗಿತ್ತು; ಬಿಲ್ಲುಗಾರರು ಅವ ನನ್ನು ಹೊಡೆದರು; ಅವನು ಬಿಲ್ಲುಗಾರರಿಂದ ಗಾಯ ಪಟ್ಟನು.

4ಆಗ ಸೌಲನು ತನ್ನ ಆಯುಧಗಳನ್ನು ಹಿಡಿಯುವವನಿಗೆ ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ಅಪಮಾನ ಮಾಡದ ಹಾಗೆ ನೀನು ನಿನ್ನ ಕತ್ತಿಯನ್ನು ಹಿರಿದು ಅದರಿಂದ ನನ್ನನ್ನು ತಿವಿ ಅಂದನು. ಆದರೆ ಅವನ ಆಯುಧ ಹಿಡಿಯುವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡದೆ ಹೋದನು. ಆಗ ಸೌಲನು ತನ್ನ ಕತ್ತಿಯನ್ನು ತೆಗೆದುಕೊಂಡು ಅದರ ಮೇಲೆ ಬಿದ್ದನು.

೧ ಪೂರ್ವಕಾಲವೃತ್ತಾಂತ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी