ಇವುಗಳನ್ನು ಯಾಜಕನು ಕರ್ತನ ಎದುರಿನಲ್ಲಿ ತಂದು ಅವನ ಪಾಪದ ಬಲಿಯನ್ನೂ ದಹನಬಲಿಯನ್ನೂ ಅರ್ಪಿಸ ಬೇಕು.
14ಅವನು ಕರ್ತನಿಗೆ ತನ್ನ ಅರ್ಪಣೆಯನ್ನು ಅರ್ಪಿಸ ಬೇಕು; ಅದೇನಂದರೆ, ದಹನ ಬಲಿಗಾಗಿ ಒಂದು ವರುಷದ ದೋಷವಿಲ್ಲದ ಟಗರಿನ ಮರಿಯನ್ನೂ ಪಾಪದ ಬಲಿಗಾಗಿ ಒಂದು ವರುಷದ ದೋಷವಿಲ್ಲದ ಒಂದು ಕುರಿಮರಿಯನ್ನೂ ಸಮಾಧಾನದ ಬಲಿಗಾಗಿ ದೋಷವಿಲ್ಲದ ಒಂದು ಟಗರನ್ನೂ ತರಬೇಕು.
15ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ಮಾಡಿದ ಹುಳಿ ಯಿಲ್ಲದ ರೊಟ್ಟಿಗಳ ಒಂದು ಪುಟ್ಟಿಯನ್ನೂ ಎಣ್ಣೇ ಹಚ್ಚಿದ ಹುಳಿಯಿಲ್ಲದ ರೊಟ್ಟಿಯ ದೋಸೆಗಳನ್ನೂ ಅವುಗಳ ಆಹಾರದ ಅರ್ಪಣೆಯನ್ನೂ ಅವುಗಳ ಪಾನಾರ್ಪಣೆಗಳನ್ನೂ ತರಬೇಕು.
16ಇವುಗಳನ್ನು ಯಾಜಕನು ಕರ್ತನ ಎದುರಿನಲ್ಲಿ ತಂದು ಅವನ ಪಾಪದ ಬಲಿಯನ್ನೂ ದಹನಬಲಿಯನ್ನೂ ಅರ್ಪಿಸ ಬೇಕು.
17ಆ ಟಗರನ್ನು ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯ ಸಂಗಡ ಕರ್ತನಿಗೆ ಸಮಾಧಾನದ ಅರ್ಪಣೆ ಗಳ ಬಲಿಗಾಗಿ ಅರ್ಪಿಸಬೇಕು; ಇದಲ್ಲದೆ ಯಾಜಕನು ಅವನ ಆಹಾರದ ಅರ್ಪಣೆಯನ್ನೂ ಪಾನಾರ್ಪಣೆ ಯನ್ನೂ ಅರ್ಪಿಸಬೇಕು.
18ಇದಲ್ಲದೆ ನಾಜೀರನು ಪ್ರತ್ಯೇಕಿಸಿಕೊಂಡ ತನ್ನ ತಲೆಯನ್ನು ಸಭೆಯ ಗುಡಾರದ ಬಾಗಲಿನ ಬಳಿಯಲ್ಲಿ ಬೋಳಿಸಿ ಪ್ರತ್ಯೇಕಿಸಿದ ತನ್ನ ತಲೆಯ ಕೂದಲನ್ನು ತಕ್ಕೊಂಡು ಸಮಾಧಾನದ ಅರ್ಪಣೆಗಳ ಬಲಿಯ ಕೆಳಗಿರುವ ಬೆಂಕಿಯಲ್ಲಿ ಹಾಕ ಬೇಕು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ