೧ ಅರಸುಗಳು 16:17

ಆಗ ಒಮ್ರಿಯೂ ಅವನ ಸಂಗಡ ಇಸ್ರಾಯೇಲ್ಯ ರೆಲ್ಲರೂ ಗಿಬ್ಬೆತೋನನ್ನು ಬಿಟ್ಟು ಹೋಗಿ ತಿರ್ಚವನ್ನು ಮುತ್ತಿಗೆ ಹಾಕಿದರು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 16

15ಯೆಹೂದದ ಅರಸನಾದ ಆಸನ ಇಪ್ಪತ್ತೇಳನೇವರುಷದಲ್ಲಿ ಜಿಮ್ರಿಯು ತಿರ್ಚದಲ್ಲಿ ಏಳು ದಿವಸ ಆಳಿದನು. ಆಗ ಜನರು ಫಿಲಿಷ್ಟಿಯರಿಗೆ ಸಂಬಂಧ ಪಟ್ಟ ಗಿಬ್ಬೆತೋನಿನ ಬಳಿಯಲ್ಲಿ ದಂಡಾಗಿ ಇಳಿದಿರುವ

16ಜಿಮ್ರಿಯು ಒಳಸಂಚು ಮಾಡಿ ಅರಸನನ್ನು ಕೊಂದು ಹಾಕಿದ್ದಾನೆಂದು ಅಲ್ಲಿ ಇಳಿದಿರುವ ದಂಡಿನವರು ಕೇಳಿ ದ್ದರಿಂದ ಇಸ್ರಾಯೇಲ್ಯರೆಲ್ಲರೂ ಅದೇ ದಿವಸದಲ್ಲಿ ದಂಡಿನೊಳಗೆ ದಂಡಿನ ಅಧಿಪತಿಯಾದ ಒಮ್ರಿಯನ್ನು ಇಸ್ರಾಯೇಲಿನ ಮೇಲೆ ಅರಸನಾಗ ಮಾಡಿದರು.

17ಆಗ ಒಮ್ರಿಯೂ ಅವನ ಸಂಗಡ ಇಸ್ರಾಯೇಲ್ಯ ರೆಲ್ಲರೂ ಗಿಬ್ಬೆತೋನನ್ನು ಬಿಟ್ಟು ಹೋಗಿ ತಿರ್ಚವನ್ನು ಮುತ್ತಿಗೆ ಹಾಕಿದರು.

18ಪಟ್ಟಣವು ಹಿಡಿಯಲ್ಪಟ್ಟದ್ದನ್ನು ಜಿಮ್ರಿಯು ನೋಡಿದಾಗ ಅವನು ಅರಮನೆಯ ಅಂತಃಪುರದೊಳಗೆ ಪ್ರವೇಶಿಸಿ ಅರಮನೆಯನ್ನು ಬೆಂಕಿ ಯಿಂದ ಸುಟ್ಟು ತಾನೂ ಸತ್ತನು.

19ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟತನಮಾಡಿ ತಾನು ಮಾಡಿದ ಪಾಪ ಗಳ ನಿಮಿತ್ತವಾಗಿಯೂ ಯಾರೊಬ್ಬಾಮನ ಮಾರ್ಗ ದಲ್ಲಿ ನಡೆದು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ಅವನ ಪಾಪದ ನಿಮಿತ್ತವಾಗಿಯೂ ಇದು ಆಯಿತು.

೧ ಅರಸುಗಳು 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी