ರೋಮಾಪುರದವರಿಗೆ 15:28

ನಾನು ಈ ಕೆಲಸವನ್ನು ತೀರಿಸಿಕೊಂಡು ಈ ಫಲವನ್ನು ಭದ್ರವಾಗಿ ಅಲ್ಲಿಯವರ ವಶಕ್ಕೆ ಕೊಟ್ಟಮೇಲೆ ನಿಮ್ಮ ಮಾರ್ಗವಾಗಿ ಸ್ಪೇನಿಗೆ ಬರುವೆನು.

ಸಂದರ್ಭದೊಂದಿಗೆ ಓದಿ · ರೋಮಾಪುರದವರಿಗೆ 15

26ಯೆರೂಸಲೇಮಿನಲ್ಲಿರುವ ಬಡವ ರಾದ ಪರಿಶುದ್ಧರಿಗೆ ಸ್ವಲ್ಪ ಸಹಾಯಮಾಡಲು ಮಕೆದೋನ್ಯ ಮತ್ತು ಅಖಾಯದವರು ಇಷ್ಟಪಟ್ಟಿದ್ದಾರೆ.

27ಇದನ್ನು ಮಾಡುವದಕ್ಕೆ ಋಣಸ್ಥರಾಗಿರುವದರಿಂದ ಅವರು ನಿಜವಾಗಿಯೂ ಇಷ್ಟಪಟ್ಟಿದ್ದಾರೆ. ಹೇಗಂದರೆ ಅನ್ಯಜನರು ಅವರ ಆತ್ಮಸಂಬಂಧವಾದವುಗಳಲ್ಲಿ ಪಾಲುಗಾರರಾದ ಮೇಲೆ ಶರೀರಸಂಬಂಧವಾದ ವುಗಳಲ್ಲಿಯೂ ಅವರಿಗೆ ಸೇವೆ ಮಾಡುವದು ಮಾತ್ರ ವಲ್ಲದೆ ಅದು ಅವರ ಕರ್ತವ್ಯವೂ ಆಗಿದೆ.

28ನಾನು ಈ ಕೆಲಸವನ್ನು ತೀರಿಸಿಕೊಂಡು ಈ ಫಲವನ್ನು ಭದ್ರವಾಗಿ ಅಲ್ಲಿಯವರ ವಶಕ್ಕೆ ಕೊಟ್ಟಮೇಲೆ ನಿಮ್ಮ ಮಾರ್ಗವಾಗಿ ಸ್ಪೇನಿಗೆ ಬರುವೆನು.

29ಹೀಗೆ ನಾನು ನಿಮ್ಮ ಬಳಿಗೆ ಬಂದಾಗ ಕ್ರಿಸ್ತನ ಸುವಾರ್ತೆಯ ಆಶೀ ರ್ವಾದದ ಪರಿಪೂರ್ಣತೆಯಿಂದ ಬರುವೆನೆಂದು ನನಗೆ ನಿಶ್ಚಯವುಂಟು.

30ಸಹೋದರರೇ, ನೀವು ನನಗೋಸ್ಕರ ದೇವರ ಮುಂದೆ ಮಾಡುವ ಪ್ರಾರ್ಥನೆಗಳಲ್ಲಿ ನನ್ನೊಂದಿಗೆ ಹೋರಾಟದಿಂದ ವಿಜ್ಞಾಪಿಸಿಕೊಳ್ಳಬೇಕೆಂದು ಕರ್ತ ನಾದ ಯೇಸು ಕ್ರಿಸ್ತನ ನಿಮಿತ್ತವಾಗಿಯೂ ಪವಿತ್ರಾತ್ಮನ ಪ್ರೀತಿಯ ನಿಮಿತ್ತವಾಗಿಯೂ ನಿಮ್ಮನ್ನು ಬೇಡಿ ಕೊಳ್ಳುತ್ತೇನೆ.

ರೋಮಾಪುರದವರಿಗೆ 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी