೨ ಅರಸುಗಳು 2:2

ಆಗ ಎಲೀಯನು ಎಲೀಷನಿಗೆ--ನೀನು ದಯಮಾಡಿ ಇಲ್ಲಿ ಇರು; ಕರ್ತನು ನನ್ನನ್ನು ಬೇತೇಲಿಗೆ ಕಳುಹಿಸು ತ್ತಾನೆ ಅಂದನು. ಅದಕ್ಕೆ ಎಲೀಷನು--ಕರ್ತನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವದಿಲ್ಲ ಅಂದನು. ಹಾಗೆಯೇ ಅವರು ಬೇತೇಲಿಗೆ ಹೋದರು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 2

1ಕರ್ತನು ಎಲೀಯನನ್ನು ಬಿರುಗಾಳಿಯಿಂದ ಆಕಾಶಕ್ಕೆ ಎತ್ತಿಕೊಳ್ಳುವಾಗ ಎಲೀಯನು ಎಲೀಷನ ಸಂಗಡ ಗಿಲ್ಗಾಲಿನಿಂದ ಹೋಗುತ್ತಾ ಇದ್ದನು.

2ಆಗ ಎಲೀಯನು ಎಲೀಷನಿಗೆ--ನೀನು ದಯಮಾಡಿ ಇಲ್ಲಿ ಇರು; ಕರ್ತನು ನನ್ನನ್ನು ಬೇತೇಲಿಗೆ ಕಳುಹಿಸು ತ್ತಾನೆ ಅಂದನು. ಅದಕ್ಕೆ ಎಲೀಷನು--ಕರ್ತನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವದಿಲ್ಲ ಅಂದನು. ಹಾಗೆಯೇ ಅವರು ಬೇತೇಲಿಗೆ ಹೋದರು.

3ಆಗ ಬೇತೇಲಿನಲ್ಲಿರುವ ಪ್ರವಾದಿಗಳ ಮಕ್ಕಳು ಎಲೀಷನ ಬಳಿಗೆ ಬಂದು ಅವನಿಗೆ--ಇಂದು ಕರ್ತನು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತಕ್ಕೊಳ್ಳುವನೆಂದು ತಿಳಿದಿದ್ದೀಯೋ ಅಂದರು.

4ಅದಕ್ಕ ವನು--ಹೌದು, ನಾನು ಕೂಡ ಬಲ್ಲೆ; ಸುಮ್ಮನೆ ಇರ್ರಿ ಅಂದನು. ಎಲೀಯನು ಅವನಿಗೆ--ಎಲೀಷನೇ, ನೀನು ದಯಮಾಡಿ ಇಲ್ಲೇ ಇರು; ಕರ್ತನು ನನ್ನನ್ನು ಯೆರಿಕೋ ವಿಗೆ ಕಳುಹಿಸುತ್ತಾನೆ ಅಂದನು. ಅದಕ್ಕವನು--ಕರ್ತನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವದಿಲ್ಲ ಅಂದನು. ಹಾಗೆಯೇ ಅವರು ಯೆರಿಕೋವಿಗೆ ಬಂದರು.

೨ ಅರಸುಗಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी