ದಾನಿಯೇಲನು 2:41

ನೀನು ಪಾದಗ ಳನ್ನೂ ಕಾಲಿನ ಬೆರಳುಗಳನ್ನೂ ಅರ್ಧ ಕುಂಬಾರನ ಮಣ್ಣಿನಿಂದಲೂ ಅರ್ಧ ಕಬ್ಬಿಣದಿಂದಲೂ ಉಂಟಾದ ವೆಂದು ನೀನು ನೋಡಿದೆಯಲ್ಲಾ? ಅದೇ ರೀತಿ ಆ ರಾಜ್ಯವು ವಿಭಾಗಿಸಲ್ಪಡುವದು; ಆದರೆ ನೀನು ಜೇಡಿ ಮಣ್ಣಿನ ಸಂಗಡ ಕಲಸಿದ ಕಬ್ಬಿಣವನ್ನು ನೋಡಿದ ಹಾಗೆ ಕಬ್ಬಿಣದ ಬಲವು ಅದರಲ್ಲಿರುವದು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 2

39ನಿನ್ನ ತರುವಾಯ ನಿನಗಿಂತ ಕನಿಷ್ಠವಾದ ಮತ್ತೊಂದು ರಾಜ್ಯ ಏಳುವದು; ಅನಂತರ ಮೂರನೇ ಹಿತ್ತಾಳೆಯ ರಾಜ್ಯ ಬರುವದು. ಅದು ಸಮಸ್ತ ಭೂಮಿಯ ಮೇಲೂ ದೊರೆತನ ನಡೆಸುವದು.

40ನಾಲ್ಕನೇ ರಾಜ್ಯವು ಕಬ್ಬಿ ಣದ ಹಾಗೆ ಬಲವಾಗಿ ಇರುವದು. ಕಬ್ಬಿಣವು ಸಮಸ್ತ ವಸ್ತುಗಳನ್ನು ವಶಮಾಡಿಕೊಂಡು ಚೂರು ಚೂರು ಮಾಡುತ್ತದೆ; ಕಬ್ಬಿಣವು ಹೇಗೆ ಎಲ್ಲವುಗಳನ್ನು ಚೂರು ಮಾಡುವದೋ ಹಾಗೆಯೇ ಆ ರಾಜ್ಯವು ಚೂರು ಚೂರಾಗಿ ಧ್ವಂಸ ಮಾಡುವದು.

41ನೀನು ಪಾದಗ ಳನ್ನೂ ಕಾಲಿನ ಬೆರಳುಗಳನ್ನೂ ಅರ್ಧ ಕುಂಬಾರನ ಮಣ್ಣಿನಿಂದಲೂ ಅರ್ಧ ಕಬ್ಬಿಣದಿಂದಲೂ ಉಂಟಾದ ವೆಂದು ನೀನು ನೋಡಿದೆಯಲ್ಲಾ? ಅದೇ ರೀತಿ ಆ ರಾಜ್ಯವು ವಿಭಾಗಿಸಲ್ಪಡುವದು; ಆದರೆ ನೀನು ಜೇಡಿ ಮಣ್ಣಿನ ಸಂಗಡ ಕಲಸಿದ ಕಬ್ಬಿಣವನ್ನು ನೋಡಿದ ಹಾಗೆ ಕಬ್ಬಿಣದ ಬಲವು ಅದರಲ್ಲಿರುವದು.

42ಪಾದದ ಬೆರಳುಗಳು ಅರ್ಧ ಕಬ್ಬಿಣದಿಂದಲೂ ಅರ್ಧ ಮಣ್ಣಿ ನಿಂದಲೂ ಮಾಡಿದ ಹಾಗೆ ರಾಜ್ಯವು ಅರ್ಧ ಮುರಿದದ್ದಾಗಿಯೂ ಅರ್ಧ ಬಲವಾಗಿಯೂ ಇರುವದು.

43ನೀನು ಕಬ್ಬಿಣವು ಜೇಡಿಮಣ್ಣಿನ ಸಂಗಡ ಕಲಸಿರು ವದನ್ನು ನೋಡಿದ ಹಾಗೆ ಅವರು ಮನುಷ್ಯನ ವಂಶಾ ವಳಿಯೊಂದಿಗೆ ಬೆರೆತುಕೊಳ್ಳುವರು; ಆದರೆ ಕಬ್ಬಿಣವು ಮಣ್ಣಿನ ಸಂಗಡ ಕೂಡಿಕೊಳ್ಳದ ಪ್ರಕಾರ ಅವರು ಒಬ್ಬರ ಸಂಗಡ ಒಬ್ಬರು ಕೂಡಿಕೊಳ್ಳುವದಿಲ್ಲ.

ದಾನಿಯೇಲನು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी