ಆಗ ಅವನು ಫರೋಹನನ್ನು ಬಿಟ್ಟುಹೋಗಿ ಕರ್ತನನ್ನು ಬೇಡಿಕೊಂಡನು.
16ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ ಅವರಿಗೆ--ನಾನು ನಿಮ್ಮ ದೇವ ರಾದ ಕರ್ತನಿಗೂ ನಿಮಗೂ ವಿರೋಧವಾಗಿ ಪಾಪ ಮಾಡಿದ್ದೇನೆ.
17ಹೀಗಿರುವದರಿಂದ ಈಗ ಈ ಒಂದೇ ಸಾರಿ ನನ್ನ ಪಾಪವನ್ನು ಕ್ಷಮಿಸಬೇಕೆಂದು ನಾನು ನಿಮ್ಮನ್ನು ಬೇಡುತ್ತೇನೆ. ಈ ಮರಣವನ್ನು ಮಾತ್ರ ನನ್ನಿಂದ ತೊಲಗಿಸುವಂತೆ ನಿಮ್ಮ ದೇವರಾದ ಕರ್ತನನ್ನು ಬೇಡಿ ಕೊಳ್ಳಿರಿ ಅಂದನು.
18ಆಗ ಅವನು ಫರೋಹನನ್ನು ಬಿಟ್ಟುಹೋಗಿ ಕರ್ತನನ್ನು ಬೇಡಿಕೊಂಡನು.
19ಕರ್ತನು ಮಹಾಬಲವಾದ ಪಶ್ಚಿಮಗಾಳಿಯನ್ನು ಬೀಸಮಾಡಿದನು. ಅದು ಮಿಡತೆಗಳನ್ನು ಎತ್ತಿಕೊಂಡು ಹೋಗಿ ಕೆಂಪುಸಮುದ್ರದಲ್ಲಿ ಹಾಕಿತು. ಐಗುಪ್ತದ ಮೇರೆಗಳಲ್ಲೆಲ್ಲಾ ಒಂದು ಮಿಡತೆಯಾದರೂ ಉಳಿಯ ಲಿಲ್ಲ.
20ಆದರೆ ಕರ್ತನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಅವನು ಇಸ್ರಾಯೇಲ್ ಮಕ್ಕಳನ್ನು ಕಳುಹಿಸದೆ ಹೋದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ