೨ ಪೂರ್ವಕಾಲವೃತ್ತಾಂತ 23:5

ಮೂರನೇ ಪಾಲು ಅರಸನ ಬಳಿಯಲ್ಲಿಯೂ ಇನ್ನೊಂದು ಮೂರನೇ ಪಾಲು ಅಸ್ತಿವಾರದ ಬಾಗಲ ಬಳಿಯಲ್ಲಿಯೂ ಸಮಸ್ತ ಜನರು ಕರ್ತನ ಆಲಯದ ಅಂಗಳಗಳಲ್ಲಿಯೂ ಇರಬೇಕು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 23

3ಆಗ ಸಭೆಯವರೆಲ್ಲರು ದೇವರ ಆಲಯದಲ್ಲಿ ಅರ ಸನ ಸಂಗಡ ಒಡಂಬಡಿಕೆ ಮಾಡಿದರು. ಅವರಿಗೆಇಗೋ, ದಾವೀದನ ಕುಮಾರರನ್ನು ಕುರಿತು ಕರ್ತನು ಹೇಳಿದ ಹಾಗೆ ಅರಸನ ಕುಮಾರನು ಆಳುವನು.

4ನೀವು ಮಾಡಬೇಕಾದ ಕಾರ್ಯವೇನಂದರೆ, ಸಬ್ಬತ್ತಿ ನಲ್ಲಿ ಪ್ರವೇಶಿಸುವ ಯಾಜಕರೂ ಲೇವಿಯರೂ ಆದ ನಿಮ್ಮಲ್ಲಿರುವ ಮೂರನೇ ಪಾಲು ದ್ವಾರಪಾಲಕರಾಗಿರ ಬೇಕು.

5ಮೂರನೇ ಪಾಲು ಅರಸನ ಬಳಿಯಲ್ಲಿಯೂ ಇನ್ನೊಂದು ಮೂರನೇ ಪಾಲು ಅಸ್ತಿವಾರದ ಬಾಗಲ ಬಳಿಯಲ್ಲಿಯೂ ಸಮಸ್ತ ಜನರು ಕರ್ತನ ಆಲಯದ ಅಂಗಳಗಳಲ್ಲಿಯೂ ಇರಬೇಕು.

6ಆದರೆ ಯಾಜಕರೂ ಲೇವಿಯರಲ್ಲಿ ಸೇವೆ ಮಾಡುವವರೂ ಅಲ್ಲದೆ ಮತ್ತ್ಯಾರೂ ಕರ್ತನ ಆಲಯದಲ್ಲಿ ಪ್ರವೇಶಿಸಕೂಡದು. ಅವರು ಪರಿಶುದ್ಧರಾದದರಿಂದ ಒಳಗೆ ಪ್ರವೇಶಿಸಲಿ. ಆದರೆ ಸಮಸ್ತ ಜನರು ಕರ್ತನ ಕಾವಲನ್ನು ಕಾಯಲಿ.

7ಇದಲ್ಲದೆ ಲೇವಿಯರಲ್ಲಿ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ಆಯುಧಗಳನ್ನು ಹಿಡುಕೊಂಡು ಅರಸನ ಸುತ್ತಲೂ ಇರಬೇಕು. ಇವರ ಹೊರತು ಯಾವನಾ ದರೂ ಆಲಯದಲ್ಲಿ ಬಂದರೆ ಅವನು ಕೊಲ್ಲಲ್ಪಡಲಿ. ಅರಸನು ಒಳಗೆ ಬರುವಾಗಲೂ ಹೊರಗೆ ಹೋಗು ವಾಗಲೂ ನೀವು ಅವನ ಸಂಗಡ ಇರ್ರಿ ಅಂದನು.

೨ ಪೂರ್ವಕಾಲವೃತ್ತಾಂತ 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी