ಆದರೆ ಅವರು ಬಹಳವಾಗಿ ಭಯಪಟ್ಟು--ಇಗೋ, ಇಬ್ಬರು ಅರಸು ಗಳು ಅವನ ಮುಂದೆ ನಿಲ್ಲಲಾರದೆ ಹೋದರು; ನಾವು ನಿಲ್ಲುವದು ಹೇಗೆ ಅಂದರು.
2ನಿಮ್ಮ ಯಜಮಾನನ ಕುಮಾರರು ನಿಮ್ಮ ಬಳಿಯಲ್ಲಿ ಇದ್ದಾರೆ; ಇದಲ್ಲದೆ ರಥಗಳೂ ಕುದುರೆಗಳೂ ಕೋಟೆಯೂ ಆಯುಧಗಳೂ ನಿಮಗೆ ಉಂಟು. ಆದದರಿಂದ ಈ ಪತ್ರವು ನಿಮ್ಮ ಬಳಿಗೆ ಬಂದಾಗ
3ನೀವು ನಿಮ್ಮ ಯಜ ಮಾನನ ಕುಮಾರರಲ್ಲಿ ಉತ್ತಮನಾಗಿರುವ ಮತ್ತು ಸಮರ್ಥನಾಗಿರುವವನನ್ನು ನೋಡಿಕೊಂಡು ಅವ ನನ್ನು ಅವನ ತಂದೆಯ ಸಿಂಹಾಸನದ ಮೇಲೆ ಕೂಡ್ರಿಸಿ ನಿಮ್ಮ ಯಜಮಾನನ ಮನೆಯವರಿಗೋಸ್ಕರ ಯುದ್ಧ ಮಾಡಿರಿ ಎಂದು ತಿಳಿಸಿದನು.
4ಆದರೆ ಅವರು ಬಹಳವಾಗಿ ಭಯಪಟ್ಟು--ಇಗೋ, ಇಬ್ಬರು ಅರಸು ಗಳು ಅವನ ಮುಂದೆ ನಿಲ್ಲಲಾರದೆ ಹೋದರು; ನಾವು ನಿಲ್ಲುವದು ಹೇಗೆ ಅಂದರು.
5ಆಗ ಮನೆಯ ಮೇಲೆ ಇರುವವನೂ ಪಟ್ಟಣದ ಮೇಲೆ ಇರುವವನೂ ಹಿರಿಯರೂ ಮಕ್ಕಳನ್ನು ಪೋಷಿಸುವವರೂ ಯೇಹು ವಿಗೆ--ನಾವು ನಿನ್ನ ಸೇವಕರು; ನೀನು ನಮಗೆ ಹೇಳುವ ದನ್ನೆಲ್ಲಾ ಮಾಡುತ್ತೇವೆ; ನಾವು ಯಾವನನ್ನಾದರೂ ಅರಸನಾಗಲು ಮಾಡುವದಿಲ್ಲ; ನಿನ್ನ ದೃಷ್ಟಿಗೆ ಒಳ್ಳೇದಾಗಿ ರುವದನ್ನು ಮಾಡು ಎಂದು ಹೇಳಿ ಕಳುಹಿಸಿದರು.
6ಆಗ ಅವನು ಅವರಿಗೆ ಎರಡನೇ ಸಾರಿ ಪತ್ರವನ್ನು ಬರೆದು--ನೀವು ನನ್ನವರಾಗಿದ್ದು ನನ್ನ ಮಾತು ಕೇಳುವ ವರಾಗಿದ್ದರೆ ನಿಮ್ಮ ಯಜಮಾನನ ಮಕ್ಕಳಾಗಿರುವ ಮನು ಷ್ಯರ ತಲೆಗಳನ್ನು ತಕ್ಕೊಂಡು ನಾಳೆ ಇಷ್ಟು ಹೊತ್ತಿಗೆ ಇಜ್ರೇಲಿಗೆ ನನ್ನ ಬಳಿಗೆ ಬನ್ನಿರಿ ಎಂದು ಹೇಳಿದನು. ಅರಸನ ಮಕ್ಕಳಾದ ಎಪ್ಪತ್ತು ಮಂದಿ ಮಕ್ಕಳು ತಮ್ಮನ್ನು ಪೋಷಿಸುವ ಪಟ್ಟಣದ ಪ್ರಮುಖರ ಬಳಿಯಲ್ಲಿ ಇದ್ದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ