ನೀನು ಅದನ್ನು ತುಂಡುಗಳನ್ನಾಗಿ ವಿಭಾಗಿಸಿ ಅದರ ಮೇಲೆ ಎಣ್ಣೆ ಸುರಿಯಬೇಕು; ಅದು ಆಹಾರ ಸಮರ್ಪಣೆಯಾಗಿದೆ.
4ನೀನು ಒಲೆಯಲ್ಲಿ ಸುಟ್ಟ ಆಹಾರ ಸಮರ್ಪಣೆ ಯನ್ನು ಕಾಣಿಕೆಯಾಗಿ ತರುವದಾದರೆ ಅದು ಹುಳಿ ಯಿಲ್ಲದ್ದಾಗಿ ಎಣ್ಣೆಯಿಂದ ಬೆರೆಸಿದ ನಯವಾದ ಹಿಟ್ಟಿನ ರೊಟ್ಟಿಗಳು ಇಲ್ಲವೆ ಹುಳಿಯಿಲ್ಲದ ಎಣ್ಣೆ ಹೊಯ್ದ ದೋಸೆಗಳಾಗಿರಬೇಕು.
5ನಿನ್ನ ಕಾಣಿಕೆಯು ಬೋಗುಣಿ ಯಲ್ಲಿ ಬೇಯಿಸಿದ ಆಹಾರ ಸಮರ್ಪಣೆಯಾಗಿದ್ದರೆ ಅದು ಹುಳಿಯಿಲ್ಲದ ನಯವಾದ ಹಿಟ್ಟಿನಿಂದ ಎಣ್ಣೆ ಮಿಶ್ರಿತವಾದದ್ದು ಆಗಿರಬೇಕು.
6ನೀನು ಅದನ್ನು ತುಂಡುಗಳನ್ನಾಗಿ ವಿಭಾಗಿಸಿ ಅದರ ಮೇಲೆ ಎಣ್ಣೆ ಸುರಿಯಬೇಕು; ಅದು ಆಹಾರ ಸಮರ್ಪಣೆಯಾಗಿದೆ.
7ನಿನ್ನ ಕಾಣಿಕೆಯು ಬಾಂಡ್ಲೆಯಲ್ಲಿ ಬೇಯಿಸಿದ ಆಹಾರ ವಾಗಿದ್ದರೆ ಅದು ನಯವಾದ ಎಣ್ಣೆಯಿಂದ ಕೂಡಿದ ಹಿಟ್ಟಿನಿಂದ ಮಾಡಿದ್ದಾಗಿರಬೇಕು.
8ನೀನು ಇವುಗಳಿಂದ ಮಾಡಿದ ಆಹಾರ ಸಮರ್ಪಣೆಯನ್ನು ಕರ್ತನಿಗೆ ತರಬೇಕು; ಅದು ಯಾಜಕನಿಗೆ ಒಪ್ಪಿಸಿದಾಗ ಅವನು ಅದನ್ನು ಯಜ್ಞವೇದಿಗೆ ತರುವನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ