ಯಾಜಕಕಾಂಡ 21:11

ಇಲ್ಲವೆ ಯಾವ ಮೃತ ಶರೀರದ ಬಳಿಗೂ ಹೋಗಬಾರದು; ತನ್ನ ತಂದೆಗಾಗಲಿ ತಾಯಿಗಾಗಲಿ ತನ್ನನ್ನು ಹೊಲೆಮಾಡಿಕೊಳ್ಳಬಾರದು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 21

9ಯಾವದೇ ಯಾಜಕನ ಮಗಳು ವ್ಯಭಿ ಚಾರ ಕೃತ್ಯದಿಂದ ತನ್ನನ್ನು ಅಪವಿತ್ರಮಾಡಿಕೊಂಡರೆ ಅವಳು ತನ್ನ ತಂದೆಯನ್ನು ಅಪವಿತ್ರಮಾಡುತ್ತಾಳೆ; ಅವಳನ್ನು ಬೆಂಕಿಯಿಂದ ಸುಡಬೇಕು.

10ಅವನ ಸಹೋದರರೊಳಗೆ ಮಹಾಯಾಜಕ ನಾಗಿದ್ದು ಯಾವನ ತಲೆಯ ಮೇಲೆ ಅಭಿಷೇಕ ತೈಲವು ಸುರಿಯಲ್ಪಟ್ಟಿದೆಯೋ ಮತ್ತು ಯಾವನು ಉಡುಪು ಗಳನ್ನು ಧರಿಸಿಕೊಳ್ಳುವದಕ್ಕೆ ಪ್ರತಿಷ್ಠಿಸಲ್ಪಟ್ಟಿದ್ದಾನೋ ಅವನು ತನ್ನ ತಲೆಯನ್ನು ಮುಚ್ಚಿಕೊಳ್ಳಲೂಬಾರದು ಮತ್ತು ತನ್ನ ಬಟ್ಟೆಗಳನ್ನು ಹರಿದುಕೊಳ್ಳಲೂಬಾರದು;

11ಇಲ್ಲವೆ ಯಾವ ಮೃತ ಶರೀರದ ಬಳಿಗೂ ಹೋಗಬಾರದು; ತನ್ನ ತಂದೆಗಾಗಲಿ ತಾಯಿಗಾಗಲಿ ತನ್ನನ್ನು ಹೊಲೆಮಾಡಿಕೊಳ್ಳಬಾರದು.

12ಇದಲ್ಲದೆ ಪರಿಶುದ್ಧ ಸ್ಥಳದಿಂದ ಹೊರಗೆ ಹೋಗಬಾರದು ತನ್ನ ದೇವರ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು; ತನ್ನ ದೇವರ ಅಭಿಷೇಕ ತೈಲದ ಕಿರೀಟವು ಅವನ ತಲೆಯ ಮೇಲೆ ಇರುತ್ತದೆ; ನಾನೇ ಕರ್ತನು.

13ಅವನು ತನಗೆ ಹೆಂಡತಿಯನ್ನು ಅವಳ ಕನ್ನಿಕಾವಸ್ಥೆಯಲ್ಲಿ ತೆಗೆದುಕೊಳ್ಳಬೇಕು.

ಯಾಜಕಕಾಂಡ 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी