ದಾನಿಯೇಲನು 8:19

ಅವನು ಹೇಳಿದ್ದೇನಂದರೆ--ಇಗೋ, ಕ್ರೋಧದ ಕಟ್ಟಕಡೆಯಲ್ಲಿ ಆಗುವದನ್ನು ನಿನಗೆ ತಿಳಿಸು ತ್ತೇನೆ. ನಿಯಮಿತ ಕಾಲದಲ್ಲಿ ಅದು ಅಂತ್ಯವಾಗುವದು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 8

17ಅದರಂತೆ ಅವನು ನನ್ನ ಬಳಿಗೆ ಬಂದನು; ಅವನು ಬಂದಾಗ ನಾನು ಭಯಪಟ್ಟು ಮುಖ ಕೆಳಗಾಗಿಬಿದ್ದೆನು; ಆದರೆ ಅವನು ನನಗೆ--ಓ ಮನುಷ್ಯ ಪುತ್ರನೇ, ಇದು ಮಂದಟ್ಟಾಗಿರಲಿ; ಅಂತ್ಯಕಾಲದಲ್ಲಿ ಈ ದರ್ಶನವು ನೆರವೇರುವದು ಅಂದನು.

18ಈಗ ಅವನು ನನ್ನ ಸಂಗಡ ಮಾತನಾಡುತ್ತಿರುವಾಗ ನಾನು ಮುಖ ಕೆಳಗಾಗಿ ನೆಲದ ಮೇಲೆ ಗಾಢ ನಿದ್ರೆಯಲ್ಲಿ ಬಿದ್ದಿದ್ದೆನು; ಆದರೆ ಅವನು ನನ್ನನ್ನು ಮುಟ್ಟಿ ನಾನು ನಿಂತುಕೊಳ್ಳುವಂತೆ ಮಾಡಿದನು.

19ಅವನು ಹೇಳಿದ್ದೇನಂದರೆ--ಇಗೋ, ಕ್ರೋಧದ ಕಟ್ಟಕಡೆಯಲ್ಲಿ ಆಗುವದನ್ನು ನಿನಗೆ ತಿಳಿಸು ತ್ತೇನೆ. ನಿಯಮಿತ ಕಾಲದಲ್ಲಿ ಅದು ಅಂತ್ಯವಾಗುವದು.

20ನೀನು ಕಂಡ ಆ ಎರಡು ಕೊಂಬುಗಳುಳ್ಳ ಟಗರು ಏನಂದರೆ ಮೇದ್ಯಯದ ಮತ್ತು ಪಾರಸಿಯರ ಅರಸರು ಗಳು.

21ಆ ಒರಟು ಹೋತವು ಗ್ರೀಕ್‌ನ ಅರಸನು ಮತ್ತು ಕಣ್ಣುಗಳ ಮಧ್ಯೆ ಇದ್ದ ಆ ದೊಡ್ಡ ಕೊಂಬು ಮೊದಲನೆಯ ಅರಸನು.

ದಾನಿಯೇಲನು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी