ಅವನು ಜೆಬುಲೂನನ ವಿಷಯವಾಗಿ--ಜೆಬು ಲೂನನೇ, ನೀನು ಹೊರಡುವದರಲ್ಲಿ ಸಂತೋಷ ಪಡು. ಇಸ್ಸಾಕಾರನೇ ನಿನ್ನ ಗುಡಾರಗಳಲ್ಲಿ ಸಂತೋಷ ಪಡು.
16ಭೂಮಿಯ ಅಮೂಲ್ಯವಾದವುಗಳಿಂದಲೂ ಅದರ ಸಂಪೂರ್ಣತೆಯಿಂದಲೂ ಕರ್ತನ ಕಡೆಯಿಂದ ಆಶೀರ್ವಾದ ಹೊಂದಲಿ; ಪೊದೆಯಲ್ಲಿ ವಾಸವಾಗಿ ದ್ದಾತನ ದಯೆಯು ಯೋಸೇಫನ ತಲೆಯ ಮೇಲೆಯೂ ತನ್ನ ಸಹೋದರರಿಂದ ಪ್ರತ್ಯೇಕವಾದವನ ತಲೆಯ ಮೇಲೆಯೂ ಬರಲಿ.
17ಅವನ ಚೊಚ್ಚಲ ಹೋರಿಯಂತೆ ಅವನಿಗೆ ಪ್ರಭೆ ಇರುವದು; ಅವನ ಕೊಂಬುಗಳು ಕಾಡುಕೋಣಗಳ ಕೊಂಬುಗಳಂತೆ ಇವೆ. ಅವುಗಳಿಂದ ಜನಗಳನ್ನು ಒಟ್ಟಿಗೆ ಭೂಮಿಯ ಅಂತ್ಯಗಳ ವರೆಗೆ ನೂಕುತ್ತಾನೆ. ಇವು ಎಫ್ರಾಯಾಮನ ಹತ್ತು ಸಾವಿರಗಳೂ ಇವು ಮನಸ್ಸೆಯ ಸಹಸ್ರವೂ ಆಗಿವೆ ಎಂದು ಹೇಳಿದನು.
18ಅವನು ಜೆಬುಲೂನನ ವಿಷಯವಾಗಿ--ಜೆಬು ಲೂನನೇ, ನೀನು ಹೊರಡುವದರಲ್ಲಿ ಸಂತೋಷ ಪಡು. ಇಸ್ಸಾಕಾರನೇ ನಿನ್ನ ಗುಡಾರಗಳಲ್ಲಿ ಸಂತೋಷ ಪಡು.
19ಅವರು ಜನಗಳನ್ನು ಬೆಟ್ಟಕ್ಕೆ ಕರೆಯುವರು. ಅಲ್ಲಿ ನೀತಿಯ ಬಲಿಗಳನ್ನು ಅರ್ಪಿಸುವರು. ಯಾಕಂದರೆ ಸಮುದ್ರಗಳ ಉಗ್ರಾಣವನ್ನೂ ಮರಳಿನ ಗುಪ್ತವಾದ ದ್ರವ್ಯವನ್ನೂ ಹೀರಿಕೊಳ್ಳುವರು ಎಂದು ಹೇಳಿದನು.
20ಗಾದನ ವಿಷಯವಾಗಿ--ಗಾದನನ್ನು ವಿಸ್ತರಿಸ ಮಾಡಿದಾತನು ಸ್ತುತಿಹೊಂದಲಿ; ಅವನು ಸಿಂಹದಂತೆ ಮಲಗಿಕೊಂಡು ತೋಳನ್ನೂ ನೆತ್ತಿಯನ್ನೂ ಕೀಳುತ್ತಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ