೧ ಸಮುವೇಲನು 27:4

ದಾವೀ ದನು ಗತ್‌ ಊರಿಗೆ ಓಡಿಹೋದನೆಂದು ಸೌಲನಿಗೆ ತಿಳಿಸಲ್ಪಟ್ಟದ್ದರಿಂದ ಅವನು ಆ ತರುವಾಯ ಅವನನ್ನು ಹುಡುಕಲಿಲ್ಲ.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 27

2ಆದದರಿಂದ ದಾವೀದನು ಎದ್ದು ತನ್ನ ಸಂಗಡವಿದ್ದ ಆರು ನೂರು ಜನರೊಡನೆ ಗತ್‌ ಊರಿನ ಅರಸನಾಗಿರುವ ಮಾವೋಕಿನ ಮಗನಾದ ಆಕೀಷನ ಬಳಿಗೆ ಹೋದನು.

3ದಾವೀದನು ಗತ್‌ ಊರಿನವ ನಾದ ಆಕೀಷನ ಬಳಿಯಲ್ಲಿ ತಾನೂ ತನ್ನ ಜನರೂ ವಾಸವಾಗಿದ್ದರು. ಪ್ರತಿ ಮನುಷ್ಯನು ತನ್ನ ಮನೆಯವರ ಸಹಿತವಾಗಿಯೂ ದಾವೀದನು ತನ್ನ ಇಬ್ಬರು ಹೆಂಡತಿ ಯರಾದ ಇಜ್ರೇಲಿಯಳಾದ ಅಹೀನೋವಮಳೂ ಕರ್ಮೆಲಿಯಳಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಸಹಿತವಾಗಿಯೂ ಇದ್ದರು.

4ದಾವೀ ದನು ಗತ್‌ ಊರಿಗೆ ಓಡಿಹೋದನೆಂದು ಸೌಲನಿಗೆ ತಿಳಿಸಲ್ಪಟ್ಟದ್ದರಿಂದ ಅವನು ಆ ತರುವಾಯ ಅವನನ್ನು ಹುಡುಕಲಿಲ್ಲ.

5ದಾವೀದನು ಆಕೀಷನಿಗೆ--ನಿನ್ನ ದೃಷ್ಟಿ ಯಲ್ಲಿ ನನಗೆ ದಯೆದೊರಕಿದ್ದರೆ ದೇಶದ ಗ್ರಾಮ ಗಳಲ್ಲಿ ನಾನು ಇರುವದಕ್ಕೆ ಅವರು ಒಂದು ಸ್ಥಳ ನನಗೆ ಕೊಡಲಿ; ನಿನ್ನ ದಾಸನು ಯಾಕೆ ನಿನ್ನ ಸಂಗಡ ರಾಜ್ಯದ ಪಟ್ಟಣದಲ್ಲಿ ಇರಬೇಕು ಅಂದನು.

6ಆಗ ಆಕೀಷನು ಆ ದಿವಸದಲ್ಲಿ ಚಿಕ್ಲಗ್‌ ಊರನ್ನು ಅವನಿಗೆ ಕೊಟ್ಟನು. ಆದದರಿಂದ ಚಿಕ್ಲಗ್‌ ಈ ವರೆಗೂ ಯೆಹೂದದ ಅರಸರಿಗೆ ಸೇರಿದೆ.

೧ ಸಮುವೇಲನು 27 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी