ಅಪೊಸ್ತಲರ ಕೃತ್ಯಗಳು 22:13

ಅವನು ನನ್ನ ಬಳಿಗೆ ಬಂದು ನಿಂತು--ಸಹೋದರನಾದ ಸೌಲನೇ, ನಿನ್ನ ದೃಷ್ಟಿಯನ್ನು ಹೊಂದು ಎಂದು ಹೇಳಿದನು. ಅದೇ ಗಳಿಗೆಯಲ್ಲಿ ನಾನು ಅವನನ್ನು ನೋಡಿದೆನು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 22

11ಆ ಬೆಳಕಿನ ಪ್ರಭಾವದ ನಿಮಿತ್ತವಾಗಿ ನನ್ನ ಕಣ್ಣು ಕಾಣಲಾರದೆ ಇದ್ದಾಗ ನನ್ನ ಜೊತೆಯಲ್ಲಿ ದ್ದವರು ನನ್ನ ಕೈ ಹಿಡಿದು ಕರಕೊಂಡು ಹೋದದ್ದರಿಂದ ನಾನು ದಮಸ್ಕಕ್ಕೆ ಬಂದೆನು.

12ಅಲ್ಲಿ ವಾಸಿಸುತ್ತಿದ್ದ ಅನನೀಯ ಎಂಬ ಒಬ್ಬ ಮನುಷ್ಯನು ಎಲ್ಲಾ ಯೆಹೂದ್ಯರಿಂದ ಒಳ್ಳೆಯವನೆಂದು ಸಾಕ್ಷಿಪಡೆದು ನ್ಯಾಯಪ್ರಮಾಣದ ಪ್ರಕಾರ ಭಕ್ತಿಯುಳ್ಳವನಾಗಿದ್ದನು.

13ಅವನು ನನ್ನ ಬಳಿಗೆ ಬಂದು ನಿಂತು--ಸಹೋದರನಾದ ಸೌಲನೇ, ನಿನ್ನ ದೃಷ್ಟಿಯನ್ನು ಹೊಂದು ಎಂದು ಹೇಳಿದನು. ಅದೇ ಗಳಿಗೆಯಲ್ಲಿ ನಾನು ಅವನನ್ನು ನೋಡಿದೆನು.

14ಆಗ ಅವನು--ನಮ್ಮ ಪಿತೃಗಳ ದೇವರ ಚಿತ್ತವನ್ನು ನೀನು ತಿಳುಕೊಳ್ಳು ವಂತೆಯೂ ಆ ನೀತಿವಂತನನ್ನು ನೋಡುವಂತೆಯೂ ಆತನ ಬಾಯಿಂದ ಬಂದ ಸ್ವರವನ್ನು ಕೇಳುವಂತೆಯೂ ಆತನು ನಿನ್ನನ್ನು ಆರಿಸಿಕೊಂಡಿದ್ದಾನೆ.

15ನೀನು ನೋಡಿ ಕೇಳಿದವುಗಳ ವಿಷಯವಾಗಿ ಎಲ್ಲಾ ಮನುಷ್ಯ ರಿಗೆ ಆತನ ಸಾಕ್ಷಿಯಾಗಿರುವಿ.

ಅಪೊಸ್ತಲರ ಕೃತ್ಯಗಳು 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी