ಕೊಲೊಸ್ಸೆಯವರಿಗೆ 1:5

ಪರಲೋಕದಲ್ಲಿ ನಿಮಗೋಸ್ಕರ ಇಡಲ್ಪಟ್ಟಿರುವ ನಿರೀಕ್ಷೆಯನ್ನು ಕುರಿತು ಸುವಾರ್ತೆಯೆಂಬ ಸತ್ಯವಾಕ್ಯದಿಂದ ನೀವು ಮೊದಲೇ ಕೇಳಿದಿರಿ.

ಸಂದರ್ಭದೊಂದಿಗೆ ಓದಿ · ಕೊಲೊಸ್ಸೆಯವರಿಗೆ 1

3ನಾವು ಪ್ರಾರ್ಥನೆ ಮಾಡುವಾಗೆಲ್ಲಾ ನಿಮ್ಮ ನಿಮಿತ್ತ ವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರಿಗೂ ತಂದೆಗೂ ಸ್ತೋತ್ರ ಮಾಡುತ್ತೇವೆ.

4ಕ್ರಿಸ್ತ ಯೇಸುವಿನಲ್ಲಿ ನೀವು ಇಟ್ಟ ನಂಬಿಕೆಯ ವಿಷಯವಾಗಿಯೂ ಪರಿಶುದ್ಧ ರೆಲ್ಲರ ಮೇಲಿರುವ ನಿಮ್ಮ ಪ್ರೀತಿಯ ವಿಷಯವಾಗಿಯೂ ನಾವು ಕೇಳಿದ್ದೇವೆ;

5ಪರಲೋಕದಲ್ಲಿ ನಿಮಗೋಸ್ಕರ ಇಡಲ್ಪಟ್ಟಿರುವ ನಿರೀಕ್ಷೆಯನ್ನು ಕುರಿತು ಸುವಾರ್ತೆಯೆಂಬ ಸತ್ಯವಾಕ್ಯದಿಂದ ನೀವು ಮೊದಲೇ ಕೇಳಿದಿರಿ.

6ನೀವು ಸತ್ಯದಲ್ಲಿ ದೇವರ ಕೃಪೆಯನ್ನು ಕೇಳಿ ತಿಳುಕೊಂಡ ದಿವಸದಿಂದ ನಿಮ್ಮ ಬಳಿಗೆ ಬಂದ ಆ ಸುವಾರ್ತೆಯು ಲೋಕದಲ್ಲೆಲ್ಲಾ ಫಲಕೊಟ್ಟಂತೆ ನಿಮ್ಮಲ್ಲಿಯೂ ಫಲ ಕೊಡುತ್ತದೆ.

7ಇದನ್ನು ನೀವು ನಮ್ಮ ಪ್ರಿಯ ಜೊತೆಯ ದಾಸನಾದ ಎಪಫ್ರನಿಂದ ಕಲಿತುಕೊಂಡಿರಿ; ಅವನು ನಿಮಗೋಸ್ಕರ ಕ್ರಿಸ್ತನ ನಂಬಿಗಸ್ತನಾದ ಸೇವಕನು.

ಕೊಲೊಸ್ಸೆಯವರಿಗೆ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी