೨ ಪೂರ್ವಕಾಲವೃತ್ತಾಂತ 18:13

ಅದಕ್ಕೆ ಮಿಕಾಯೆಹುವು--ಕರ್ತನ ಜೀವ ದಾಣೆ, ನನ್ನ ದೇವರು ಏನು ಹೇಳುವನೋ ಅದನ್ನು ಹೇಳುವೆನು ಅಂದನು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 18

11ಸಮಸ್ತ ಪ್ರವಾದಿಗಳೂ ಹಾಗೆಯೇ ಪ್ರವಾದಿಸಿ--ಗಿಲ್ಯಾದಿನಲ್ಲಿರುವ ರಾಮೋ ತಿಗೆ ಹೋಗಿ ಜಯಹೊಂದು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು.

12ಆದರೆ ವಿಾಕಾಯೆಹುವನ್ನು ಕರೆಯುವದಕ್ಕೆ ಹೋದ ಸೇವಕನು ಅವನಿಗೆ--ಇಗೋ, ಪ್ರವಾದಿಗಳ ಮಾತುಗಳು ಒಂದೇ ಒಪ್ಪಿಗೆಯಿಂದ ಅರಸನಿಗೆ ಒಳ್ಳೇ ದನ್ನು ಪ್ರಕಟಿಸುತ್ತವೆ; ನಿನ್ನ ಮಾತು ಅವರಲ್ಲಿ ಒಬ್ಬನ ಮಾತಿನ ಹಾಗೆಯೇ ಇರಲಿ; ಒಳ್ಳೇ ಮಾತು ಆಡು ಅಂದನು.

13ಅದಕ್ಕೆ ಮಿಕಾಯೆಹುವು--ಕರ್ತನ ಜೀವ ದಾಣೆ, ನನ್ನ ದೇವರು ಏನು ಹೇಳುವನೋ ಅದನ್ನು ಹೇಳುವೆನು ಅಂದನು.

14ಅವನು ಅರಸನ ಬಳಿಗೆ ಬಂದಾಗ ಅರಸನು ಅವನಿಗೆ--ವಿಾಕಾಯೆಹುವೇ, ನಾವು ರಾಮೋತ್‌ ಗಿಲ್ಯಾದಿಗೆ ಯುದ್ಧಕ್ಕೆ ಹೋಗಲೋ ಇಲ್ಲವೆ ನಾವು ಹೋಗುವದು ಬೇಡವೋ? ಅಂದನು. ಆಗ ಅವನು--ಹೋಗಿ ಜಯಹೊಂದಿರಿ, ಅವರು ನಿಮ್ಮ ಕೈಯಲ್ಲಿ ಒಪ್ಪಿಸಲ್ಪಡುವರು ಅಂದನು.

15ಆಗ ಅರಸನು ಅವನಿಗೆ--ನೀನು ಕರ್ತನ ಹೆಸರಿನಲ್ಲಿ ಸತ್ಯ ವನ್ನಲ್ಲದೆ ಬೇರೊಂದು ನನಗೆ ಹೇಳಬಾರದೆಂದು ನಾನು ಎಷ್ಟುಸಾರಿ ನಿನಗೆ ಆಣೆ ಇಡಬೇಕು ಅಂದನು.

೨ ಪೂರ್ವಕಾಲವೃತ್ತಾಂತ 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी