ಯೆಹೆಜ್ಕೇಲನು 35:8

ಅದರ ಪರ್ವತಗಳನ್ನು ನಿನ್ನವರ ಹೆಣಗಳಿಂದ ತುಂಬಿ ಸುವರು. ನಿನ್ನ ಕತ್ತಿಯಿಂದ ಹತವಾದವರು ನಿನ್ನ ಹಳ್ಳ ಕೊಳ್ಳಗಳಲ್ಲಿಯೂ ಬೀಳುವರು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 35

6ಆದದರಿಂದ ದೇವರಾದ ಕರ್ತನು ಹೇಳುತ್ತಾನೆ-- ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು; ರಕ್ತದ ಕೋಡಿಯು ನಿನ್ನನ್ನು ಬೆನ್ನಟ್ಟು ವದು; ನೀನು ರಕ್ತಸುರಿಸುವದಕ್ಕೆ ಹೇಸದೆ ಹೋದ ಕಾರಣ ರಕ್ತಪ್ರವಾಹವೇ ನಿನ್ನ ಬೆನ್ನು ಹತ್ತುವದು.

7ಹೀಗೆ ನಾನು ಸೇಯಾರ್‌ ಪರ್ವತವನ್ನು ಸಂಪೂರ್ಣ ಹಾಳು ಮಾಡುವೆನು; ಅದರೊಳಗೆ ಹಾದು ಹೋಗು ವವನನ್ನೂ ಹಿಂತಿರುಗುವವನನ್ನೂ ಕಡಿದುಹಾಕುವೆನು.

8ಅದರ ಪರ್ವತಗಳನ್ನು ನಿನ್ನವರ ಹೆಣಗಳಿಂದ ತುಂಬಿ ಸುವರು. ನಿನ್ನ ಕತ್ತಿಯಿಂದ ಹತವಾದವರು ನಿನ್ನ ಹಳ್ಳ ಕೊಳ್ಳಗಳಲ್ಲಿಯೂ ಬೀಳುವರು.

9ನಾನು ನಿನ್ನನ್ನು ನಿತ್ಯ ನಾಶಕ್ಕೆ ಗುರಿಮಾಡುವೆನು; ನಿನ್ನ ನಗರಗಳು ಹಿಂತಿರುಗುವದಿಲ್ಲ ನಾನೇ ಕರ್ತನೆಂದು ನೀನು ತಿಳಿದುಕೊಳ್ಳುವಿ.

10ಕರ್ತನು ಅವುಗಳಲ್ಲಿರುವದರಿಂದ ಈ ಎರಡು ಜನಾಂಗಗಳೂ ಈ ಎರಡು ರಾಜ್ಯಗಳೂ ನನ್ನವಾಗು ವವು. ನೀನು ಹೇಳಿದ್ದರಿಂದ ನಾವು ಅವುಗಳನ್ನು ವಶಮಾಡಿಕೊಳ್ಳುತ್ತೇವೆ.

ಯೆಹೆಜ್ಕೇಲನು 35 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी