ನಹೂಮ 3:3

ಸವಾರನು ಹತ್ತುತ್ತಾನೆ, ಕತ್ತಿಗಳು ಮಿಂಚು ತ್ತವೆ. ಈಟಿಗಳು ಥಳಥಳಿಸುತ್ತವೆ, ಹತವಾದವರು ಬಹಳ; ಹೆಣಗಳು ಬಹಳ; ಶವಗಳಿಗೆ ಅಂತ್ಯವೇ ಇಲ್ಲ; ಅವರು ಶವಗಳ ಮೇಲೆ ಎಡವುತ್ತಾರೆ.

ಸಂದರ್ಭದೊಂದಿಗೆ ಓದಿ · ನಹೂಮ 3

1ರಕ್ತವುಳ್ಳ ಪಟ್ಟಣಕ್ಕೆ ಅಯ್ಯೋ! ಅದೆಲ್ಲಾ ಸುಳ್ಳಿನಿಂದಲೂ ಕಳ್ಳತನದಿಂದಲೂ ತುಂಬಿ ಯದೆ; ಕೊಳ್ಳೆಯನ್ನು ಬಿಡುವದಿಲ್ಲ.

2ಚಾವಟಿಗೆ ಚಬುಕಿನ ಶಬ್ದವೂ ಚಕ್ರಗಳ ಧಡಧಡನೆಯ ಶಬ್ದವೂ ಕುದುರೆಗಳ ಕುಣಿದಾಟವೂ ರಥಗಳ ಹಾರಾಟವೂ ಉಂಟು.

3ಸವಾರನು ಹತ್ತುತ್ತಾನೆ, ಕತ್ತಿಗಳು ಮಿಂಚು ತ್ತವೆ. ಈಟಿಗಳು ಥಳಥಳಿಸುತ್ತವೆ, ಹತವಾದವರು ಬಹಳ; ಹೆಣಗಳು ಬಹಳ; ಶವಗಳಿಗೆ ಅಂತ್ಯವೇ ಇಲ್ಲ; ಅವರು ಶವಗಳ ಮೇಲೆ ಎಡವುತ್ತಾರೆ.

4ಸೌಂದರ್ಯವುಳ್ಳ ಮಾಟಗಾರ್ತಿಯಾದ ಸೂಳೆಯ ಸೂಳೆತನಗಳು ಬಹಳ; ಅವಳು ತನ್ನ ಸೂಳೆತನಗಳಿಂದ ಜನಾಂಗಗಳನ್ನೂ ತನ್ನ ಮಾಟಗಳಿಂದ ಗೋತ್ರಗಳನ್ನೂ ಮಾರಿದಳಲ್ಲಾ?

5ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ನಿನಗೆ ವಿರೋಧವಾಗಿ ದ್ದೇನೆ; ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲೆ ಎತ್ತಿ ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ.

ನಹೂಮ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी