ಅದಕ್ಕೆ ಜನರು ಯೆಹೋಶುವ ನಿಗೆ--ಇಲ್ಲ; ಆದರೆ ನಾವು ಕರ್ತನನ್ನೇ ಸೇವಿಸುವೆವು ಅಂದರು.
19ಅದಕ್ಕೆ ಯೆಹೋ ಶುವನು ಜನರಿಗೆ--ನೀವು ಕರ್ತನನ್ನು ಸೇವಿಸಲಾರಿರಿ; ಯಾಕಂದರೆ ಆತನು ಪರಿಶುದ್ಧನಾದ ದೇವರು, ರೋಷ ವುಳ್ಳ ದೇವರು; ಆತನು ನಿಮ್ಮ ದ್ರೋಹಗಳನ್ನೂ ಪಾಪಗಳನ್ನೂ ಮನ್ನಿಸನು.
20ಕರ್ತನನ್ನು ಬಿಟ್ಟು ಅನ್ಯ ದೇವರುಗಳನ್ನು ಸೇವಿಸಿದರೆ ಒಳ್ಳೇದನ್ನು ಮಾಡದೆ ಆತನು ನಿಮಗೆ ಕೇಡುಮಾಡಿ ನಿಮ್ಮನ್ನು ದಹಿಸಿಬಿಡುವನು ಎಂದು ಹೇಳಿದನು.
21ಅದಕ್ಕೆ ಜನರು ಯೆಹೋಶುವ ನಿಗೆ--ಇಲ್ಲ; ಆದರೆ ನಾವು ಕರ್ತನನ್ನೇ ಸೇವಿಸುವೆವು ಅಂದರು.
22ಯೆಹೋಶುವನು ಜನರಿಗೆ--ನೀವು ಕರ್ತನನ್ನು ಸೇವಿಸುವದಕ್ಕೆ ಆತನನ್ನು ಆದು ಕೊಂಡಿರು ವಿರೆಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ ಅಂದನು.
23ಅದಕ್ಕವರು--ನಾವೇ ಸಾಕ್ಷಿಗಳಾಗಿದ್ದೇವೆ ಅಂದರು. ಅದಕ್ಕವನು--ಈಗ ನಿಮ್ಮ ಮಧ್ಯದಲ್ಲಿರುವ ಅನ್ಯ ದೇವರುಗಳನ್ನು ತೊರೆದು ನಿಮ್ಮ ಹೃದಯವನ್ನು ಇಸ್ರಾಯೇಲಿನ ದೇವರಾದ ಕರ್ತನಿಗೆ ತಿರುಗಿಸಿರಿ ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ