೨ ಅರಸುಗಳು 13:24

ಹೀಗೆ ಅರಾಮ್ಯರ ಅರಸ ನಾದ ಹಜಾಯೇಲನು ಸತ್ತನು; ಅವನ ಮಗನಾದ ಬೆನ್ಹದದನು ಅವನಿಗೆ ಬದಲಾಗಿ ಅರಸನಾದನು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 13

22ಯೆಹೋವಾಹಾಜನ ದಿವಸಗಳಲ್ಲೆಲ್ಲಾ ಅರಾ ಮ್ಯರ ಅರಸನಾದ ಹಜಾಯೇಲನು ಇಸ್ರಾಯೇಲನ್ನು ಬಾಧೆಪಡಿಸಿದನು.

23ಆದರೆ ಕರ್ತನು ಅಬ್ರಹಾಮನ ಇಸಾಕನ ಯಾಕೋಬನ ಸಂಗಡ ಒಡಂಬಡಿಕೆಯನ್ನು ಮಾಡಿದ್ದರಿಂದ ಅವರಿಗೆ ದಯಮಾಡಿ ಅವರ ಮೇಲೆ ಕೃಪೆ ತೋರಿಸಿ ಅವರ ಕಡೆಗೆ ತಿರುಗಿದನು. ಇನ್ನೂ ಅವರನ್ನು ನಾಶ ಮಾಡಲು ಅವರನ್ನು ತನ್ನಿಂದ ತೊರೆದು ಬಿಡಲು ಮನಸ್ಸಾಗಲಿಲ್ಲ, ಅವರನ್ನು ತನ್ನ ಸಮ್ಮುಖದಿಂದ ಹೊರಡಿಸಲೂ ಇಲ್ಲ.

24ಹೀಗೆ ಅರಾಮ್ಯರ ಅರಸ ನಾದ ಹಜಾಯೇಲನು ಸತ್ತನು; ಅವನ ಮಗನಾದ ಬೆನ್ಹದದನು ಅವನಿಗೆ ಬದಲಾಗಿ ಅರಸನಾದನು.

25ಆಗ ಯೆಹೋವಾಹಾಜನ ಮಗನಾದ ಯೋವಾ ಷನು ಯುದ್ಧದಲ್ಲಿ ತನ್ನ ತಂದೆಯಾದ ಯೆಹೋ ವಾಹಾಜನ ಕೈಯಿಂದ ಹಜಾಯೇಲನು ತಕ್ಕೊಂಡಿದ್ದ ಪಟ್ಟಣಗಳನ್ನು ಅವನ ಮಗನಾದ ಬೆನ್ಹದದನ ಕೈ ಯಿಂದ ತಿರಿಗಿ ತಕ್ಕೊಂಡನು. ಯೋವಾಷನು ಅವನನ್ನು ಮೂರು ಸಾರಿ ಹೊಡೆದು ಇಸ್ರಾಯೇಲಿನ ಪಟ್ಟಣ ಗಳನ್ನು ತಿರಿಗಿ ತಕ್ಕೊಂಡನು.

೨ ಅರಸುಗಳು 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी