ಯಾಜಕಕಾಂಡ 9:4

ಕರ್ತನ ಮುಂದೆ ಯಜ್ಞಕ್ಕೆ ಸಮಾಧಾನ ಬಲಿಗಳಿಗಾಗಿ ಹೋರಿಯನ್ನೂ ಟಗರನ್ನೂ ಸಹ ತೆಗೆದುಕೊಳ್ಳಬೇಕು; ಆಹಾರದ ಅರ್ಪಣೆಯು ಎಣ್ಣೆಯೊಂದಿಗೆ ಬೆರೆತಿರಬೇಕು; ಈ ದಿನವೇ ಕರ್ತನು ನಿಮಗೆ ಕಾಣಿಸಿಕೊಳ್ಳುವನು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 9

2ಅವನು ಆರೋನನಿಗೆ ಹೇಳಿದ್ದೇನಂದರೆ--ಪಾಪದ ಬಲಿಗಾಗಿ ಒಂದು ಎಳೆಯ ಕರುವನ್ನೂ ದಹನ ಬಲಿಗಾಗಿ ದೋಷವಿಲ್ಲದ ಟಗರನ್ನೂ ನೀನು ತೆಗೆದು ಕೊಂಡು ಅವುಗಳನ್ನು ಕರ್ತನ ಸನ್ನಿಧಿಯಲ್ಲಿ ಸಮರ್ಪಿಸು.

3ನೀನು ಇಸ್ರಾಯೇಲ್‌ ಮಕ್ಕಳಿಗೆ ಹೇಳಬೇಕಾದದ್ದೇ ನಂದರೆ--ಪಾಪದ ಬಲಿಗಾಗಿ ಮೇಕೆಗಳಲ್ಲಿ ಮರಿ ಯನ್ನೂ ದಹನಬಲಿಗಾಗಿ ದೋಷವಿಲ್ಲದ ಒಂದು ವರ್ಷದ ಕರುವನ್ನೂ ಒಂದು ವರ್ಷದ ಕುರಿಮರಿ ಯನ್ನೂ ತೆಗೆದುಕೊಳ್ಳಬೇಕು.

4ಕರ್ತನ ಮುಂದೆ ಯಜ್ಞಕ್ಕೆ ಸಮಾಧಾನ ಬಲಿಗಳಿಗಾಗಿ ಹೋರಿಯನ್ನೂ ಟಗರನ್ನೂ ಸಹ ತೆಗೆದುಕೊಳ್ಳಬೇಕು; ಆಹಾರದ ಅರ್ಪಣೆಯು ಎಣ್ಣೆಯೊಂದಿಗೆ ಬೆರೆತಿರಬೇಕು; ಈ ದಿನವೇ ಕರ್ತನು ನಿಮಗೆ ಕಾಣಿಸಿಕೊಳ್ಳುವನು.

5ಮೋಶೆಯು ಆಜ್ಞಾಪಿಸಿದವುಗಳನ್ನು ಅವರು ಸಭೆಯ ಗುಡಾರದ ಮುಂದೆ ತಂದರು; ಸಭೆಯೆಲ್ಲವೂ ಹತ್ತಿರ ಬಂದು ಕರ್ತನ ಮುಂದೆ ನಿಂತಿತು.

6ಆಗ ಮೋಶೆಯು--ಕರ್ತನು ಆಜ್ಞಾಪಿಸಿದ್ದು ಇದೇ, ನೀವು ಇದನ್ನು ಮಾಡಿರಿ; ಕರ್ತನ ಮಹಿಮೆಯು ನಿಮಗೆ ಕಾಣಿಸಿಕೊಳ್ಳುವದು ಅಂದನು.

ಯಾಜಕಕಾಂಡ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी