ಆದಿಕಾಂಡ 31:12

ಅವನು ನನಗೆ--ಲಾಬಾನನು ನಿನಗೆ ಮಾಡಿದ್ದನ್ನೆಲ್ಲಾ ನೋಡಿದ್ದೇನೆ. ಆದದರಿಂದ ನಿನ್ನ ಕಣ್ಣುಗಳನ್ನೆತ್ತಿ ಕುರಿಗಳ ಮೇಲೆ ಏರುವ ಎಲ್ಲಾ ಟಗರುಗಳನ್ನು ನೋಡು; ಅವು ಚುಕ್ಕೆ ಮಚ್ಚೆ ರೇಖೆಯೂ ಉಳ್ಳವುಗಳಾಗಿವೆ.

ಸಂದರ್ಭದೊಂದಿಗೆ ಓದಿ · ಆದಿಕಾಂಡ 31

10ಇದಲ್ಲದೆ ಕುರಿಗಳು ಗರ್ಭದರಿಸುವಾಗ ಆದದ್ದೇನೆಂದರೆ ಸ್ವಪ್ನದಲ್ಲಿ ನಾನು ನನ್ನ ಕಣ್ಣುಗಳನ್ನೆತ್ತಿ ನೋಡಲಾಗಿ ಇಗೋ, ಕುರಿ ಗಳ ಮೇಲೆ ಏರುವ ಟಗರುಗಳು ಚುಕ್ಕೆ ಮಚ್ಚೆ ರೇಖೆಗಳುಳ್ಳವುಗಳಾಗಿದ್ದವು.

11ಆಗ ದೇವದೂತನು ಸ್ವಪ್ನದಲ್ಲಿ ನನಗೆ ಯಾಕೋಬನೇ ಅಂದನು. ಅದಕ್ಕೆ ನಾನು--ಇಲ್ಲಿ ಇದ್ದೇನೆ ಅಂದೆನು.

12ಅವನು ನನಗೆ--ಲಾಬಾನನು ನಿನಗೆ ಮಾಡಿದ್ದನ್ನೆಲ್ಲಾ ನೋಡಿದ್ದೇನೆ. ಆದದರಿಂದ ನಿನ್ನ ಕಣ್ಣುಗಳನ್ನೆತ್ತಿ ಕುರಿಗಳ ಮೇಲೆ ಏರುವ ಎಲ್ಲಾ ಟಗರುಗಳನ್ನು ನೋಡು; ಅವು ಚುಕ್ಕೆ ಮಚ್ಚೆ ರೇಖೆಯೂ ಉಳ್ಳವುಗಳಾಗಿವೆ.

13ನೀನು ಸ್ತಂಭವನ್ನು ಅಭಿಷೇಕಿಸಿ ನನಗೆ ಪ್ರಮಾಣ ಮಾಡಿದ ಬೇತೇಲಿನ ದೇವರು ನಾನೇ. ಈಗ ಎದ್ದು ಈ ದೇಶದೊಳಗಿಂದ ಹೊರಟು ನಿನ್ನ ಬಂಧುಗಳ ದೇಶಕ್ಕೆ ತಿರಿಗಿ ಹೋಗು ಅಂದನು.

14ಆಗ ರಾಹೇಲಳು ಮತ್ತು ಲೇಯಳು ಅವನಿಗೆ--ನಮ್ಮ ತಂದೆಯ ಮನೆಯಲ್ಲಿ ನಮಗೆ ಭಾಗವೂ ಬಾಧ್ಯತೆಯೂ ಇನ್ನೇನದೆ?

ಆದಿಕಾಂಡ 31 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी