ಮಾರ್ಕನು 15:45

ಅವನು ಶತಾಧಿಪತಿಯಿಂದ ಅದನ್ನು ತಿಳಿದುಕೊಂಡ ಮೇಲೆ ಆ ದೇಹವನ್ನು ಯೊಸೇಫನಿಗೆ ಕೊಟ್ಟನು.

ಸಂದರ್ಭದೊಂದಿಗೆ ಓದಿ · ಮಾರ್ಕನು 15

43ಆ ಸಮಯದಲ್ಲಿ ಗೌರವವುಳ್ಳವನೂ ಆಲೋಚನಾ ಸಭೆಯವನೂ ದೇವರ ರಾಜ್ಯಕ್ಕಾಗಿ ಕಾಯುತ್ತಿದ್ದವನೂ ಆದ ಅರಿ ಮಥಾಯದ ಯೋಸೇಫನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹಕ್ಕಾಗಿ ಬೇಡಿ ಕೊಂಡನು.

44ಆದರೆ ಆತನು ಆಗಲೇ ಸತ್ತನೋ ಎಂದು ಪಿಲಾತನು ಆಶ್ಚರ್ಯಪಟ್ಟು ಶತಾಧಿಪತಿಯನ್ನು ತನ್ನ ಬಳಿಗೆ ಕರೆದು--ಆತನು ಸತ್ತು ಎಷ್ಟು ಸಮಯ ವಾಯಿತು ಎಂದು ಅವನನ್ನು ಕೇಳಿದನು.

45ಅವನು ಶತಾಧಿಪತಿಯಿಂದ ಅದನ್ನು ತಿಳಿದುಕೊಂಡ ಮೇಲೆ ಆ ದೇಹವನ್ನು ಯೊಸೇಫನಿಗೆ ಕೊಟ್ಟನು.

46ಆಗ ಅವನು ಶುಭ್ರವಾದ ನಾರು ಮಡಿಯನ್ನು ಕೊಂಡು ಕೊಂಡು ಆತನನ್ನು (ಶಿಲುಬೆಯಿಂದ) ಇಳಿಸಿ ಆ ನಾರುಮಡಿಯಲ್ಲಿ ಆತನನ್ನು ಸುತ್ತಿ ಬಂಡೆಯಲ್ಲಿ ತೋಡಿಸಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಲಿಗೆ ಒಂದು ಕಲ್ಲನ್ನು ಉರುಳಿಸಿದನು.

47ಮಗ್ದಲದ ಮರಿಯಳೂ ಯೋಸೆಯ ತಾಯಿಯಾದ ಮರಿಯಳೂ ಆತನನ್ನು ಇಟ್ಟಿದ್ದ ಸ್ಥಳವನ್ನು ನೋಡಿದರು.

ಮಾರ್ಕನು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी