ಅಪೊಸ್ತಲರ ಕೃತ್ಯಗಳು 7:5

ಅಲ್ಲಿ ದೇವರು ಅವನಿಗೆ ಕಾಲಿಡುವಷ್ಟು ಸ್ವಾಸ್ತ್ಯವನ್ನು ಕೊಡ ಲಿಲ್ಲ; ಆದಾಗ್ಯೂ ಅವನಿಗೆ ಇನ್ನೂ ಮಗನು ಇಲ್ಲದಿರು ವಾಗ ಆ ದೇಶವನ್ನು ಅವನಿಗೂ ತರುವಾಯ ಅವನ ಸಂತತಿಗೂ ಸ್ವಾಸ್ಥ್ಯವಾಗಿ ಕೊಡುತ್ತೇನೆಂದು ವಾಗ್ದಾನ ಮಾಡಿದನು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 7

3ನೀನು ನಿನ್ನ ದೇಶವನ್ನೂ ನಿನ್ನ ಬಂಧುಬಳಗವನ್ನೂ ಬಿಟ್ಟು ನಾನು ನಿನಗೆ ತೋರಿ ಸುವ ದೇಶಕ್ಕೆ ಬರಬೇಕು ಎಂದು ಹೇಳಿದನು.

4ಆಗ ಅಬ್ರಹಾಮನು ಕಲ್ದೀಯರ ದೇಶದೊಳಗಿಂದ ಬಂದು ಖಾರಾನಿನಲ್ಲಿ ವಾಸಮಾಡಿದನು; ತನ್ನ ತಂದೆಯು ಸತ್ತಮೇಲೆ ಅವನು ಅಲ್ಲಿಂದ ಹೊರಟು ನೀವು ಈಗ ವಾಸವಾಗಿರುವ ಈ ದೇಶಕ್ಕೆ ಬಂದನು.

5ಅಲ್ಲಿ ದೇವರು ಅವನಿಗೆ ಕಾಲಿಡುವಷ್ಟು ಸ್ವಾಸ್ತ್ಯವನ್ನು ಕೊಡ ಲಿಲ್ಲ; ಆದಾಗ್ಯೂ ಅವನಿಗೆ ಇನ್ನೂ ಮಗನು ಇಲ್ಲದಿರು ವಾಗ ಆ ದೇಶವನ್ನು ಅವನಿಗೂ ತರುವಾಯ ಅವನ ಸಂತತಿಗೂ ಸ್ವಾಸ್ಥ್ಯವಾಗಿ ಕೊಡುತ್ತೇನೆಂದು ವಾಗ್ದಾನ ಮಾಡಿದನು.

6ಇದಲ್ಲದೆ ದೇವರು ಈ ರೀತಿ ಹೇಳಿ ದನು--ನಿನ್ನ ಸಂತಾನದವರು ಅನ್ಯದೇಶದಲ್ಲಿ ಪ್ರವಾಸಿ ಗಳಾಗಿರುವರು. ಆ ಅನ್ಯದೇಶದವರು ಅವರನ್ನು ದಾಸ ರನ್ನಾಗಿ ಮಾಡಿಕೊಂಡು ನಾನೂರು ವರುಷಗಳ ತನಕ ಕ್ರೂರವಾಗಿ ನಡಿಸುವರು.

7ಅವರು ದಾಸರಾಗಿ ಸೇವಿ ಸುವ ಜನಾಂಗಕ್ಕೆ ನಾನೇ ನ್ಯಾಯತೀರಿಸುವೆನು ಎಂದು ದೇವರು ಹೇಳಿದನು. ಆಮೇಲೆ ಅವರು ಹೊರಟು ಬಂದು ಈ ಸ್ಥಳದಲ್ಲಿ ನನ್ನನ್ನು ಸೇವಿಸುವರು ಎಂಬದೇ.

ಅಪೊಸ್ತಲರ ಕೃತ್ಯಗಳು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी