ನ್ಯಾಯಸ್ಥಾಪಕರು 15:6

ಫಿಲಿಷ್ಟಿಯರು--ಇದನ್ನು ಮಾಡಿದವರು ಯಾರು ಅಂದರು. ಅದಕ್ಕೆ ಅವರು--ತಿಮ್ನಾ ಊರಿನ ಅಳಿಯ ನಾದ ಸಂಸೋನನು ಮಾಡಿದನು; ಯಾಕಂದರೆ ಇವನು ಅವನ ಹೆಂಡತಿಯನ್ನು ತಕ್ಕೊಂಡು ಅವನ ಜೊತೆ ಗಾರನಿಗೆ ಕೊಟ್ಟನು ಅಂದರು. ಆಗ ಫಿಲಿಷ್ಟಿಯರು ಬಂದು ಅವಳನ್ನೂ ಅವಳ ತಂದೆಯನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 15

4ಪಂಜುಗಳನ್ನು ತಕ್ಕೊಂಡು ಬಂದು ಬಾಲಕ್ಕೆ ಬಾಲ ಸೇರಿಸಿ ಎರಡು ಬಾಲಗಳ ನಡುವೆ ಒಂದು ಪಂಜನ್ನು ಕಟ್ಟಿ

5ಅದಕ್ಕೆ ಬೆಂಕಿಹಚ್ಚಿ ಅವುಗಳನ್ನು ಫಿಲಿಷ್ಟಿಯರ ಪೈರಿನಲ್ಲಿ ಕಳುಹಿಸಿಬಿಟ್ಟು ತೆನೆ ಗೂಡುಗಳನ್ನೂ ಪೈರುಗಳನ್ನೂ ದ್ರಾಕ್ಷೇತೋಟಗಳನ್ನೂ ಇಪ್ಪೆಯ ತೋಪುಗಳನ್ನೂ ಕೂಡ ಸುಟ್ಟುಬಿಟ್ಟನು.

6ಫಿಲಿಷ್ಟಿಯರು--ಇದನ್ನು ಮಾಡಿದವರು ಯಾರು ಅಂದರು. ಅದಕ್ಕೆ ಅವರು--ತಿಮ್ನಾ ಊರಿನ ಅಳಿಯ ನಾದ ಸಂಸೋನನು ಮಾಡಿದನು; ಯಾಕಂದರೆ ಇವನು ಅವನ ಹೆಂಡತಿಯನ್ನು ತಕ್ಕೊಂಡು ಅವನ ಜೊತೆ ಗಾರನಿಗೆ ಕೊಟ್ಟನು ಅಂದರು. ಆಗ ಫಿಲಿಷ್ಟಿಯರು ಬಂದು ಅವಳನ್ನೂ ಅವಳ ತಂದೆಯನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು.

7ಸಂಸೋನನು ಅವರಿಗೆ--ನೀವು ಈ ಪ್ರಕಾರ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿಗೆ ಮುಯ್ಯಿ ಮಾಡಿಯೇ ಬಿಡುವೆನು ಅಂದನು.

8ಅವನು ಅವರ ತೊಡೆ ಸೊಂಟಗಳನ್ನು ಹೊಡೆದು ದೊಡ್ಡ ಸಂಹಾರಮಾಡಿ ತಾನು ಹೋಗಿ ಏಟಾಮ್‌ ಬಂಡೆಯ ಮೇಲೆ ವಾಸವಾಗಿದ್ದನು.

ನ್ಯಾಯಸ್ಥಾಪಕರು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी