ಲೂಕನು 9:31

ಇವರು ಮಹಿಮೆಯಲ್ಲಿ ಕಾಣಿಸಿಕೊಂಡು ಆತನು ಯೆರೂಸ ಲೇಮಿನಲ್ಲಿ ಪೂರೈಸುವದಕ್ಕಿದ್ದ ಆತನ ಮರಣದ ವಿಷಯವಾಗಿ ಮಾತನಾಡುತ್ತಿದ್ದರು.

ಸಂದರ್ಭದೊಂದಿಗೆ ಓದಿ · ಲೂಕನು 9

29ಆತನು ಪ್ರಾರ್ಥನೆ ಮಾಡುತ್ತಿದ್ದಾಗ ಆತನ ಮುಖ ಭಾವವು ಬದಲಾಯಿತು; ಉಡುಪು ಬೆಳ್ಳಗಾಗಿ ಪ್ರಕಾಶಮಾನವಾಯಿತು.

30ಇಗೋ, ಮೋಶೆ ಮತ್ತು ಎಲೀಯ ಎಂಬ ಇಬ್ಬರು ಪುರುಷರು ಆತನೊಂದಿಗೆ ಮಾತನಾಡುತ್ತಿದ್ದರು.

31ಇವರು ಮಹಿಮೆಯಲ್ಲಿ ಕಾಣಿಸಿಕೊಂಡು ಆತನು ಯೆರೂಸ ಲೇಮಿನಲ್ಲಿ ಪೂರೈಸುವದಕ್ಕಿದ್ದ ಆತನ ಮರಣದ ವಿಷಯವಾಗಿ ಮಾತನಾಡುತ್ತಿದ್ದರು.

32ಆದರೆ ಪೇತ್ರನೂ ಅವನ ಸಂಗಡ ಇದ್ದವರೂ ನಿದ್ರೆಯಿಂದ ಭಾರವುಳ್ಳವರಾಗಿದ್ದರು; ಅವರು ಎಚ್ಚತ್ತಾಗ ಆತನ ಮಹಿಮೆಯನ್ನೂ ಆತನ ಕೂಡ ನಿಂತಿದ್ದ ಇಬ್ಬರು ಪುರಷರನ್ನೂ ನೋಡಿದರು.

33ಇದಾದ ಮೇಲೆ ಅವರು ಹೋಗುತ್ತಿದ್ದಾಗ ಪೇತ್ರನು ಯೇಸುವಿಗೆ--ಬೋಧಕನೇ, ನಾವು ಇಲ್ಲೇ ಇರುವದು ನಮಗೆ ಒಳ್ಳೇದು; ನಾವು ನಿನಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು ಮೂರು ಗುಡಾರಗಳನ್ನು ಮಾಡುವೆವು ಅಂದನು. ತಾನು ಹೇಳಿದ್ದನ್ನು ಅವನು ಅರಿಯದೆ ಇದ್ದನು.

ಲೂಕನು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी