ಆತನು ಭದ್ರವಾದ ಪಟ್ಟಣದಲ್ಲಿ ತನ್ನ ಆಶ್ಚ ರ್ಯವಾದ ಕರುಣೆ ನನಗೆ ತೋರಿಸಿದ್ದಾನೆ ಕರ್ತ ನಿಗೆ ಸ್ತೋತ್ರ.
19ನಿನಗೆ ಭಯಪಡುವವರಿಗೋಸ್ಕರ ಮನುಷ್ಯ ಪುತ್ರರ ಮುಂದೆ ನಿನ್ನಲ್ಲಿ ಭರವಸೆ ಇಟ್ಟವರಿಗೋಸ್ಕರ ನೀನು ಇಟ್ಟಿರುವ ಒಳ್ಳೇತನವು ಎಷ್ಟೋ ದೊಡ್ಡದು.
20ಅವರನ್ನು ನಿನ್ನ ಸನ್ನಿಧಾನದ ಮರೆಯಲ್ಲಿ ಮನು ಷ್ಯರ ಗರ್ವಕ್ಕೆ ನೀನು ಮರೆಮಾಡುತ್ತೀ; ನಾಲಿಗೆಗಳ ವಿವಾದಕ್ಕೆ ಡೇರೆಯಲ್ಲಿ ಗುಪ್ತವಾಗಿ ಅವರನ್ನು ಕಾಪಾ ಡುವಿ.
21ಆತನು ಭದ್ರವಾದ ಪಟ್ಟಣದಲ್ಲಿ ತನ್ನ ಆಶ್ಚ ರ್ಯವಾದ ಕರುಣೆ ನನಗೆ ತೋರಿಸಿದ್ದಾನೆ ಕರ್ತ ನಿಗೆ ಸ್ತೋತ್ರ.
22ಆದರೆ ನಾನು ನಿನ್ನ ಕಣ್ಣುಗಳ ಎದುರಿನಿಂದ ಕಡಿದು ಹಾಕಲ್ಪಟ್ಟಿದ್ದೇನೆಂದು ಆತುರ ದಲ್ಲಿ ಹೇಳಿದೆನು; ಆದರೂ ನಾನು ಮೊರೆಯಿಡು ವಾಗ ನನ್ನ ವಿಜ್ಞಾಪನೆಗಳ ಸ್ವರವನ್ನು ನೀನು ಕೇಳಿದಿ.
23ಕರ್ತನ ಎಲ್ಲಾ ಪರಿಶುದ್ಧರೇ, ಆತನನ್ನು ಪ್ರೀತಿ ಮಾಡಿರಿ; ಕರ್ತನು ನಂಬಿಕೆಯುಳ್ಳವರನ್ನು ಕಾಯು ತ್ತಾನೆ; ಅಹಂಕಾರ ಮಾಡುವವನಿಗೆ ಬಹಳವಾಗಿ ಮುಯ್ಯಿಗೆಮುಯ್ಯಿ ತೀರಿಸುತ್ತಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ